ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಗುರುವಾರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದ ಬಗ್ಗೆ ಊಹಾಪೋಹಗಳಿಗೆ ತಿರುಗೇಟು ನೀಡಿದ್ದು ನಾನು ಅವರನ್ನು ಭೇಟಿಯಾಗಾಬೇಕೆಂದರೆ ಬಹಿರಂಗವಾಗೇ ಭೇಟಿ ಮಾಡುತ್ತೇನೆ ಎಂದಿದ್ದಾರೆ. ಜೆಪಿ ನಡ್ಡಾ ಮತ್ತು ಆನಂದ್ ಶರ್ಮಾ ಇಬ್ಬರೂ ಹಿಮಾಚಲ ಪ್ರದೇಶದವರಾಗಿದ್ದು ಒಂದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ನಾನು ಅವರನ್ನು ಮುಕ್ತವಾಗೇ ಭೇಟಿ ಮಾಡುವುದಾಗಿ ಆನಂದ್ ಶರ್ಮಾ ಗುಡುಗಿದ್ದಾರೆ.
ನಾನು ಜೆಪಿ ನಡ್ಡಾ ಅವರೊಂದಿಗೆ ಹಳೆಯ ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಿದ್ದೆವು. ನನ್ನ ರಾಜ್ಯ ಮತ್ತು ನಾನು ಓದಿದ ವಿಶ್ವವಿದ್ಯಾನಿಲಯದಿಂದ ಬಂದವರು ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ನನಗೆ ಹೆಮ್ಮೆ ಇದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದ ಮಾತ್ರಕ್ಕೆ ವೈಯಕ್ತಿಕ ದ್ವೇಷವಿದೆ ಎಂದಲ್ಲ. ನಾನು ಜೆಪಿ ನಡ್ಡಾ ಅವರನ್ನು ಭೇಟಿಯಾಗಬೇಕಾದರೆ ನಾನು ಬಹಿರಂಗವಾಗೇ ಭೇಟಿ ಮಾಡುತ್ತೇನೆ. ಅದು ನನ್ನ ಹಕ್ಕು, ನಾನು ಊಹಾಪೋಹಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ತಮ್ಮ ಭೇಟಿ ಬಗ್ಗೆ ಎದ್ದಿದ ಊಹಾಪೋಹಗಳಿಗೆ ಉತ್ತರಿಸಿದರು.
ಮಾಜಿ ಕೇಂದ್ರ ಸಚಿವರಾದ ಶರ್ಮಾ ಹಿಮಾಚಲ ಪ್ರದೇಶ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಅವರನ್ನು ಮತ್ತು ನಡ್ಡಾ ಅವರನ್ನು ಅಭಿನಂದಿಸಲು ಆಹ್ವಾನಿಸಿದೆ. ಸಭೆಗೆ ಹಾಜರಾಗುವ ಕುರಿತು ನಡ್ಡಾ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದೇನೆ ಎಂದು ಆನಂದ್ ಶರ್ಮಾ ತಿಳಿಸಿದ್ದಾರೆ.
ಆನಂದ್ ಶರ್ಮಾ ಕಾಂಗ್ರೆಸ್ ನಾಯಕರ G-23 ಗುಂಪಿನ ಪ್ರಮುಖ ಸದಸ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಭೇಟಿಯನ್ನ ಬಿಜೆಪಿ ಸೇರಲು ಯತ್ನಿಸುತ್ತಿದ್ದಾರೆ ಎಂಬಂತೇ ಬಿಂಬಿಸಲಾಗಿತ್ತು.