ಬೆಂಗಳೂರು: ಫೆಬ್ರವರಿ 09 (ಉದಯಕಾಲ) ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಇಂಧನ ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಹಿಜಾಬ್ ಧರಿಸಲು ಆದೇಶಿಸುತ್ತಾರೆ ಎಂದು ಕಾಂಗ್ರೆಸ್ ಮೇಲೆ ಕಿಡಿಕಾರಿದರು. ಕಾಂಗ್ರೆಸ್ ಅಧಿಕಾರ ವಹಿಸಿಕೊಂಡರೆ ಹಿಂದೂಗಳು ಹಿಜಾಬ್ ಧರಿಸಲು ಕಾನೂನನ್ನು ರಚಿಸುವ ಸಾಧ್ಯತೆಯಿದೆ ಎಂದು ಹೇಳಿದರು.
“ಕಾಂಗ್ರೆಸ್ಗೆ ಜನಾದೇಶ ಸಿಕ್ಕರೆ ಹಿಂದೂಗಳೆಲ್ಲ ಹಿಜಾಬ್ ಧರಿಸಬೇಕು ಎಂಬ ಕಾನೂನು ಬರಬಹುದು. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಇಂತಹ ಮನಸ್ಥಿತಿಯಿಂದ ಹೊರಬರಬೇಕು. ನಿನ್ನೆ ಡಿಕೆ ಶಿವಕುಮಾರ್ ಧ್ವಜ ತೆಗೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.