ಕ್ರಿಕೆಟಿಗರ ಭದ್ರತೆಗೆ ಐಸಿಸಿ ಭರವಸೆ

ದುಬೈ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್’ನಲ್ಲಿ ಭಾರತೀಯ ಆಟಗಾರರ ರಕ್ಷಣೆ ಬಗ್ಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಸಮಾಲೋಚನೆ ಮಾಡಲಾಗುವುದು ಎಂದು ಬಿಸಿಸಿಐಗೆ ಐಸಿಸಿ ಭರವಸೆ ನೀಡಿದೆ.

ದುಬೈನಲ್ಲಿ ಐಸಿಸಿ ಎಕ್ಸಿಕ್ಯೂಟಿವ್ ಸಮಿತಿ ಸಭೆ ಆರಂಭವಾಗಿದ್ದು, ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಆಟಗಾರರ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿ ಸಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಬಿಸಿಸಿಐನ ಈ ಕಳವಳದ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಸಿಯ ಸಿಇಒ ರಿಚರ್ಡ್ಸನ್, ಸಭೆಯಲ್ಲಿ ಆಟಗಾರರ ರಕ್ಷಣೆ ಪ್ರಮುಖ ವಿಷಯವಾಗಿಲ್ಲದಿದ್ದರೂ, ಬಿಸಿಸಿಐ ಮನವಿ ಮೇರೆಗೆ ಈ ಕುರಿತು ಎಲ್ಲ ಸೂಕ್ತ ಕ್ರಮಗಳನ್ನ ಕೈಗೊಳ್ಳಲಾಗುವುದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಬಿಸಿಸಿಐ ಕೋರಿಕೆಯನ್ನು ಮನ್ನಿಸಲಾಗಿದೆ. ಐಸಿಸಿ ಸಭೆಯ ಅಜೆಂಡಾದಲ್ಲಿ ಈ ವಿಷಯ ಇರದೇ ಇದ್ದರೂ, ಪ್ರಸ್ತುತ ಗಂಭೀರ ವಿಷಯವಾಗಿರುವುದರಿಂದ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಐಸಿಸಿ ಹೇಳಿದೆ. ಭಾರತದ ಮಾಜಿ ಕ್ರಿಕೆಟರುಗಳಾದ ಹರ್ಭಜನ್ ಸಿಂಗ್ ಹಾಗೂ ಸೌರವ್ ಗಂಗೂಲಿ, ಜೂನ್ 16ರ ರಂದು ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯವನ್ನ ಬಹಿಷ್ಕಾರ ಮಾಡುವಂತೆ ಒತ್ತಾಯಿಸಿದ್ದರು. ಇನ್ನು ಪಾಕಿಸ್ತಾನದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಆ ರಾಷ್ಟ್ರದ ವಿರುದ್ಧ ಕ್ರಿಕೆಟ್ ಆಡಬಾರದು ಎಂಬ ಒತ್ತಾಯ ದೇಶಾದ್ಯಂತ ಕೇಳಿ ಬಂದಿತ್ತು.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯ(ಜು.16) ಬಹಿಷ್ಕರಿಸುವಂತೆ ಆಗ್ರಹಿಸಿ, ಟೀಂ ಇಂಡಿಯಾದ ಮಾಜಿ ಆಟಗಾರರರಾದ ಹರ್ಭಜನ್ ಸಿಂಗ್, ಸೌರವ್ ಗಂಗೂಲಿ ಮುಂತಾದವರು ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಸಚಿನ ತೆಂಡುಲ್ಕರ್ ಮತ್ತು ಕಪಿಲ್ ದೇವ ಪಂದ್ಯವಾಡುವುದನ್ನು ಬೆಂಬಲಿಸಿದ್ದರು. ಆದರೆ, ಪಂದ್ಯ ನಡೆಸಬೇಕೇ ಬೇಡವೇ ಎಂಬುದರ ಕುರಿತಂತೆ ಬಿಸಿಸಿಐ, ಇನ್ನು ಯಾವುದೇ ನಿರ್ಧಾರಕ್ಕೆ ಬಂದಂತಿಲ್ಲ ಎಂದು ಮೂಲಗಳು ತಿಳಿಸಿವೆ.

,

Leave a Reply

Your email address will not be published. Required fields are marked *