ನಾನು ಸತ್ತೋದ್ರು ಪ್ರಶಾಂತ್ ಸಂಬರಗಿಯನ್ನು ಬಿಡಲ್ಲ; ನಟಿ ಸಂಜನಾ

ಬೆಂಗಳೂರು: ಜಮೀರ್ ಅಹಮದ್ ಯಾರು ಅನ್ನೋದು ನನಗೆ ಗೊತ್ತಿಲ್ಲ, ನಾನು ಸತ್ತು ಹೋದರು ಸಂಬರಗಿನ ಬಿಡೋದಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಅವರು ಪ್ರಶಾಂತ್​ ಸಂಬರಗಿ ವಿರುದ್ಧ ಗುಡುಗಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮದ ಜೊತೆ ಪ್ರಶಾಂತ್​ ಸಂಬರಗಿ ಅವರ ಟ್ವಿಟರ್​ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ತಾಯಿಗೆ ಏನಾದರೂ ಆದರೆ ಸುಮ್ಮನಿರೋದಿಲ್ಲ. ಆರೋಪಗಳನ್ನೆಲ್ಲಾ ಕೇಳಿ, ನಮ್ಮ ತಾಯಿಗೆ ಎದೆ ನೋವು ಬರ್ತಿದೆ ಎಂದು ನಟಿ ಸಂಜನಾ ಅವರು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಶ್ರೀಲಂಕಾ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾರ್ಯಕ್ರಮಕ್ಕೆ ಗೆಸ್ಟ್​ ಆಗಿ ಹೋಗಿದ್ದು ನಿಜ. ಕ್ಯಾಸಿನೋದಲ್ಲಿ ಹಲವು ನಟ-ನಟಿಯರು ಭಾಗಿಯಾಗಿದ್ದರು. ಜಮೀರ್ ಅವರೇ, ಸಂಬರಗಿ ಅವರನ್ನು ಬಿಡಬೇಡಿ ಎಂದು ನಟಿ ಸಂಜನಾ ಗಲ್ರಾನಿ ಅವರು ಪ್ರಶಾಂತ್​ ಸಂಬರಗಿ ವಿರುದ್ಧ ಗರಂ ಆದರು.

Leave a Reply

Your email address will not be published. Required fields are marked *