ಜಾತಿ ರಾಜಕಾರಣ ಮಾಡಿಲ್ಲ; ಚುನಾವಣೆ ಸಂದರ್ಭ ಆರೋಪ ಸಹಜ- ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಜಾತಿ ರಾಜಕಾರಣ ಮಾಡಿಲ್ಲ; ಚುನಾವಣೆ ಸಂದರ್ಭ ಆರೋಪ ಸಹಜ- ಎಚ್‌ಡಿಕೆಗೆ ಡಿಕೆಶಿ
ತಿರುಗೇಟು
ಬೆಂಗಳೂರು, ಅ.16 ಒಕ್ಕಲಿಗ ಜಾತಿ ಮೇಲೆ ರಾಜಕೀಯ ಮಾಡುವವ ನಾನಲ್ಲ
ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಮಾಜಿ ಮುಖ್ಯಮಂತ್ರಿ
ಹೆಚ್.ಡಿ‌.ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ತಾವು
ಮೂಲತಃ ಕೃಷಿಕ. ತಮ್ಮ ತಂದೆ ತಾಯಿ ಒಕ್ಕಲಿಗರು. ಶಾಲೆಗೆ ಸೇರಿಸುವಾಗ ಒಕ್ಕಲಿಗ ಎಂದು
ಕೊಟ್ಟಿದ್ದಾರೆ. ಆದರೆ, ಜಾತಿ ಮೇಲೆ ರಾಜಕೀಯ ಮಾಡಲ್ಲ ಎಂದರು.
ಜಾತಿ ಮೇಲೆ ರಾಜಕೀಯ ಮಾಡಲು ತಮಗೆ ಇಷ್ಟ ಇಲ್ಲ. ತಾವು ಕಾಂಗ್ರೆಸಿಗ, ಕಾಂಗ್ರೆಸ್
ಪಕ್ಷವೇ ತಮ್ಮ ಜಾತಿ. ‘ಕುಮಾರಸ್ವಾಮಿ ಅವರು ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಅವರು
ನನ್ನ ಬಗ್ಗೆ ಏಕೆ ಟೀಕೆ ಮಾಡುತ್ತಾರೆ. ಅವರ ಪಕ್ಷ ಅವರದು, ನಮ್ಮ ಪಕ್ಷ ನಮ್ಮದು. ಅವರ

ಕರ್ತವ್ಯ ಅವರು ಮಾಡುತ್ತಾರೆ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಕುಮಾರಸ್ವಾಮಿ
ಕೊಡುವ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
‘ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷ ಬೇರೆ ಪಕ್ಷಗಳ ಮತ ಸೆಳೆಯುವುದು ಸಹಜ.
ಜೆಡಿಎಸ್‌ನವರು ನಮ್ಮ ಮತಗಳನ್ನು, ಬಿಜೆಪಿ ಮತಗಳನ್ನು ಸೆಳೆಯುತ್ತಾರೆ. ಅದೇ ರೀತಿ ನಾವು
ಕೂಡ ಬಿಜೆಪಿ, ಜೆಡಿಎಸ್ ಹಾಗೂ ಬೇರೆ ಪಕ್ಷಗಳ ಮತ ಸೆಳೆಯಲು ಪ್ರಯತ್ನಿಸುತ್ತೇವೆ. ನಮ್ಮ
ಅಭ್ಯರ್ಥಿ, ಪಕ್ಷದ ಸಿದ್ಧಾಂತ, ನಾಯಕತ್ವ ನೋಡಿ ಯಾರು ಪಕ್ಷಕ್ಕೆ ಬರುತ್ತಾರೋ ನಾವು
ಅವರನ್ನು ಕರೆದುಕೊಳ್ಳುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಇಂತಹ ರಾಜಕೀಯ ಸಹಜ
ಎಂದರು.
ಡಿ.ಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನು
ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕೆಂಬ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಗ್ರಹಕ್ಕೆ
ಪ್ರತಿಕ್ರಿಯಿಸಿದ ಶಿವಕುಮಾರ್, ಯಾರನ್ನು ಪಕ್ಷದಿಂದ ಉಚ್ಚಾಟಿಸಬೇಕು, ಉಚ್ಚಾಟಿಸಬಾರದು
ಎಂದು ಮಾಧ್ಯಮಗಳ ಎದುರು, ಬಿಜೆಪಿಯವರ ಎದುರು ಮಾತನಾಡುವುದಲ್ಲ. ಅಖಂಡಗೆ
ನೋವಿದ್ದರೆ ನನ್ನ ಬಳಿ ಬಂದು ಮಾತನಾಡಲಿ, ಮಾಧ್ಯಮದ ಎದುರು ಮಾತನಾಡುವುದು
ಶಿಸ್ತಲ್ಲ ಎಂದು ಅಖಂಡ ಹೇಳಿಕೆಗೆ ಡಿಕೆಶಿ ಗರಂ ಆದರು.

,

Leave a Reply

Your email address will not be published. Required fields are marked *