ಕ್ರಿಕೆಟ್ ಟೀಮ್ ಕಟ್ಟುವಷ್ಟು ಮಕ್ಕಳು ಬೇಕು : ಪ್ರಿಯಾಂಕಾ ಚೋಪ್ರಾ

ಕ್ರಿಕೆಟ್ ಟೀಮ್ ಕಟ್ಟುವಷ್ಟು ಮಕ್ಕಳು ಬೇಕು : ಪ್ರಿಯಾಂಕಾ ಚೋಪ್ರಾ

ಮುಂಬೈ, ಜ 12 ಗಾಯಕ ನಿಕ್ ಜೋನಸ್ ಜತೆ ಸುಖ ಸಂಸಾರ ನಡೆಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಮನೆ ತುಂಬಾ ಮಕ್ಕಳನ್ನು ಪಡೆಯುವ ಆಸೆ ಉಂಟಾಗಿದೆಯಂತೆ.

ಸಂದರ್ಶನವೊಂದರಲ್ಲಿ ಇತ್ತೀಚೆಗೆ ಈ ವಿಷಯ ತಿಳಿಸಿರುವ ಪಿಗ್ಗಿ, ತುಂಬಾ ಮಕ್ಕಳನ್ನು ಪಡೆಯುವ ಆಸೆ ಇದೆ. ‘ನಾನು ಮಕ್ಕಳನ್ನು ಪಡೆಯಲು ಬಯಸುತ್ತೇನೆ. ಎಷ್ಟು ಸಾಧ್ಯವೋ ಅಷ್ಟು’ ಎಂದು ಹೇಳಿದ್ದು, ಎಷ್ಟು ಮಕ್ಕಳು ಬೇಕು ಎಂದು ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ‘ಕ್ರಿಕೆಟ್ ಟೀಮ್ ಕಟ್ಟುವಷ್ಟು’ ಎಂದು ಎಂದಿದ್ದಾರೆ.

ನಿಕ್ ಜತೆಗಿನ ಹೊಂದಾಣಿಕೆ ಕುರಿತು ಮಾತನಾಡಿರುವ ಪ್ರಿಯಾಂಕಾ, ‘ಭಾರತಕ್ಕೆ ಬರಬೇಕು ಎಂದಾಗಲೆಲ್ಲ ನಿಕ್ ನೀರಿನಲ್ಲಿ ಇರುವ ಮೀನಿನಂತೆ ಕರೆದುಕೊಂಡು ಬರುತ್ತಾರೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರೆ ಇಬ್ಬರ ನಡುವೆ ಸಮಸ್ಯೆ ಇರುವುದಿಲ್ಲ’ ಎಂದಿದ್ದಾರೆ.

ಕೊರೋನಾ ಕ್ವಾರಂಟೈನ್ ಬಗ್ಗೆ ಪ್ರಸ್ತಾಪಿಸಿ, ‘ನಮಗೆ ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಯಿತು. ನಿಜಕ್ಕೂ ಒಂದು ರೀತಿಯಲ್ಲಿ ಒಳ್ಳೆಯದಾಯಿತು. ಇಬ್ಬರ ಮೃತ್ತಿಜೀವನದಲ್ಲಿ ಒಟ್ಟಿಗೆ ಸಮಯ ಕಳೆಯಲು ಸಿಗುವುದೇ ತೀರಾ ಕಡಿಮೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *