ಬೆಳಗಾವಿ ನಗರ ಪಾಲಿಕೆಯ ಪ್ರಥಮ ಕನ್ನಡ ಭಾಷಿಕ ಮಹಾಪೌರ ಸಿದ್ದನಗೌಡ ಪಾಟೀಲ್ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನಷ್ಟ: ಸಚಿವ ರಮೇಶ್ ಜಾರಕಿಹೊಳಿ‌

ಬೆಳಗಾವಿ ನಗರ ಪಾಲಿಕೆಯ ಪ್ರಥಮ ಕನ್ನಡ ಭಾಷಿಕ ಮಹಾಪೌರರಾಗಿದ್ದ ಶ್ರೀ ಸಿದ್ದನಗೌಡ ಪಾಟೀಲ್ ಅವರ ನಿಧನವು ವೈಯಕ್ತಿಕವಾಗಿ ನನಗೆ ತುಂಬಾ ನಷ್ಟವನ್ನು ಉಂಟುಮಾಡಿದೆ.

87 ವರ್ಷ ವಯಸ್ಸಿನ ಪಾಟೀಲ್ ರು, ಗಡಿ ಜಿಲ್ಲೆಯಾದ ಬೆಳಗಾವಿ ಯಲ್ಲಿ ಕನ್ನಡ ಭಾಷೆಯ ಹೋರಾಟದ ‌ಮುಂಚೂಣಿ ನಾಯಕರಾಗಿದ್ದರು.

1991ರಲ್ಲಿ ಪ್ರಥಮ ಕನ್ನಡ ಭಾಷಿಕ ಮಹಾಪೌರರಾಗಿ, ಗ್ರಾಹಕರ ಮಹಾಮಂಡಳಿಯ‌ ಅಧ್ಯಕ್ಷರಾಗಿ, ಕನ್ನಡ ನಾಡು, ನುಡಿ ಮತ್ತು ಗಡಿ ಹೋರಾಟದ ಅಗ್ರಗಣ್ಯ ನಾಯಕರಾಗಿದ್ದರು ಮತ್ತು ವೈಯಕ್ತಿಕವಾಗಿ ನನಗೆ ಮಾರ್ಗದರ್ಶಕರಾಗಿದ್ದರು.

ಇವರನ್ನು‌ ಕಳೆದುಕೊಂಡ ನಮಗೆಲ್ಲಾ‌ ಅನಾಥ ಪ್ರಜ್ಞೆ ಕಾಡುತ್ತಿದೆ. ಸಿದ್ದನಗೌಡ ಪಾಟೀಲ್ ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ ಕುಟುಂಬದ ಸದಸ್ಯರಿಗೆ, ಕನ್ನಡ ಭಾಷಿಕ‌ ಹೋರಾಟಗಾರರಿಗೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ
– ಶ್ರೀ ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲ ಸಚಿವರು

Leave a Reply

Your email address will not be published. Required fields are marked *