ಮುಖ್ಯಮಂತ್ರಿಗಳೇ ವೈಮಾನಿಕ ಸಮೀಕ್ಷೆಯ ಮೂಲಕ ನಮ್ಮ ನೋವನ್ನು ನೋಡಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ


ಕಲಬುರಗಿ, ಅ.21 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ನಿಮ್ಮ
ಪ್ರವಾಹ ಪ್ರವಾಸೋದ್ಯಮ ತಡವಾಯಿತು. ವೈಮಾನಿಕ ಸಮೀಕ್ಷೆಯ ಮೂಲಕ ನಮ್ಮ
ನೋವನ್ನು ನೀವು ನೋಡಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಅವರ
ವೈಮಾನಿಕ ಸಮೀಕ್ಷೆಗೆ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ
ಶಾಸಕರು, ಈಗ ಭೀಮಾ ಹಾಗೂ ಕಾಗಿನಾ ನದಿ ನೀರು ಕಡಿಮೆಯಾಗಿದೆ. ಈಗ ಜನರ ಅಪೇಕ್ಷೆ
ಪರಿಹಾರ ಮಾತ್ರ ಎಂದು ಪ್ರವಾಹ ಪೀಡಿತ ಗ್ರಾಮಗಳ ಜನರ ನೋವನ್ನು ಅವರು
ತೋಡಿಕೊಂಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ವೈ ಅವರು ಇಂದು ವೈಮಾನಿಕ
ಸಮೀಕ್ಷೆ ಕೈಗೊಂಡ ಹಿನ್ನೆಲೆಯಲ್ಲಿ ಶಾಸಕರು ಟ್ವೀಟ್ ಮಾಡಿದ್ದಾರೆ.

, ,

Leave a Reply

Your email address will not be published. Required fields are marked *