ಹಾಕಿ: ಜರ್ಮನಿ ಮಣಿಸಿದ ಭಾರತಕ್ಕೆ ಕಂಚು

ಟೋಕಿಯೊ, ಆ.5 – ಒಲಿಂಪಿಕ್ಸ್ ನ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಜರ್ಮನಿ ತಂಡವನ್ನು ಮಣಿಸಿ, ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಗುರುವಾರ ನಡೆದ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಮನ್ ಪ್ರೀತ್ ಪಡೆ 5-4 ರಿಂದ ಜರ್ಮನಿ ತಂಡವನ್ನು ಸೋಲಿಸಿ ಪದಕಕ್ಕೆ ಕೊರಳೊಡ್ಡಿತು. ಈ ಮೂಲಕ ಭಾರತ 41 ವರ್ಷಗಳ ಬಳಿಕ ಪೋಡಿಯಂಗೆ ಏರಿತು. ಭಾರತ ಇದಕ್ಕೂ ಮುನ್ನ 1968, 1972ರಲ್ಲಿ ಕಂಚಿನ ಪದಕ ಪಡೆದಿತ್ತು.

,

Leave a Reply

Your email address will not be published. Required fields are marked *