ಪ್ರಧಾನಿ ಬಳಿಕ ಕೊರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಸಚಿವ ಹರ್ಷವರ್ಧನ್

ಪ್ರಧಾನಿ ಬಳಿಕ ಕೊರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಸಚಿವ ಹರ್ಷವರ್ಧನ್


ನವದೆಹಲಿ, ಮಾ 2 ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಅವರ ಪತ್ನಿ ನುತನ್ ಗೋಯಲ್ ಅವರು ಮಂಗಳವಾರ ದೆಹಲಿ ಹಾರ್ಟ್ ಅಂಡ್ ಲಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡರು .
60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ರಿಂದ 59 ವರ್ಷ ವಯಸ್ಸಿನ ಅನಾರೋಗ್ಯ ಪೀಡಿತರಿಗೆ ಕೋವಿಡ್-19 ಲಸಿಕೆಯ ಎರಡನೇ ಹಂತದ ಅಭಿಯಾನ ದೇಶವ್ಯಾಪಿ ಆರಂಭವಾಗಿದೆ .
ಈಗಾಗಲೇ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನವೀನ್ ಪಟ್ನಾಯಕ್, ನಿತೀಶ್ ಕುಮಾರ್ ಸೇರಿ ಹಲವು ಹಿರಿಯ ರಾಜಕೀಯ ನಾಯಕರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

,

Leave a Reply

Your email address will not be published. Required fields are marked *