ಮುಳಬಾಗಲು: ಕೆರೆಗಳ ಒತ್ತುವರಿ ತೆರವು ಗೊಳಿಸುವಂತೆ ಕರವೇ ಅಧ್ಯಕ್ಷ ಹರೀಶ್ ಗೌಡ ತಹಸೀಲ್ದಾರ್ ರವರಿಗೆ ಮನವಿ

ಮುಳಬಾಗಲು: ಕೆರೆಗಳ ಒತ್ತುವರಿ ತೆರವು ಗೊಳಿಸುವಂತೆ ಕರವೇ ಅಧ್ಯಕ್ಷ ಹರೀಶ್ ಗೌಡ ತಹಸೀಲ್ದಾರ್ ರವರಿಗೆ ಮನವಿ

ಮುಳಬಾಗಲು: ತಾಲೂಕಿನ ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು ಕೂಡಲೇ ತೆರವು ಗೊಳಿಸುವಂತೆ ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಹರೀಶ್ ಗೌಡ ತಹಸೀಲ್ದಾರ್ ರವರಿಗೆ ಮನವಿ ಮಾಡಿದ್ದಾರೆ.
ಅವರು ನಗರದ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿ ತಾಲೂಕಿನಲ್ಲಿ ಭಾಗಶಃ ಎಲ್ಲಾ ಕೆರೆಗಳು ಒತ್ತುವರಿಯಾಗಿದ್ದು ತಾವು ಪರಿಶೀಲನೆ ನಡೆಸಿ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಿ ಬೇಕೆಂದು ತಿಳಿಸಿದರು. ಅದೇ ರೀತಿ ರಾಜು ಕಾಲುವೆಗಳು ಒತ್ತುವರಿ ಯಾಗಿದ್ದು ಉದಾಹರಣೆಗೆ ಮಿಟ್ಟಹಳ್ಳಿ ಗೌಡನಕೆರೆ, ಮಾವಿನ ಕುಂಟೆ ಕೆರೆಗಳು ಸಹ ಒತ್ತುವರಿಯಾಗಿ ರುತ್ತದೆ ಆದ್ದರಿಂದ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯಾಗಿರುವುದು ತಿಳಿಸಬೇಕೆಂದು ಮನವಿ ಮಾಡಿದರು.
ಕೇಸರಿ ಶಂಕರ್, ಶ್ರೀನಿವಾಸ್ ಗೌಡ, ಸಂತೋಷ್, ಭರತ್ ಗೌಡ, ಶ್ರೀಕಾಂತ್ ಗೌಡ, ವಿನೋದ್ ಗೌಡ, ಜಗದೀಶ್, ವಂಶಿ, ನರೇಶ್, ಸಂಪತ್, ಅಭಿ, ಸೋಮಶೇಖರ್ ,ರಂಜಿತ್, ಅಂಬರೀಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *