ಅಂದು ಚಹರ್‌ ಕ್ರಿಕೆಟ್‌ ಗೆ ನಿಷ್ಪ್ರಯೋಜಕ ಎಂದಿದ್ದರು ಗ್ರೆಗ್‌ ಚಾಪೆಲ್‌ ….!

ಅಂದು ಚಹರ್‌ ಕ್ರಿಕೆಟ್‌ ಗೆ ನಿಷ್ಪ್ರಯೋಜಕ ಎಂದಿದ್ದರು ಗ್ರೆಗ್‌ ಚಾಪೆಲ್‌ ….!

ನವದೆಹಲಿ, ಜುಲೈ 22 ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತಮ್ಮ ಸಂಚಲನಾತ್ಮಕ ಬ್ಯಾಟಿಂಗ್ ( 69 ನಾಟೌಟ್‌ )ಮೂಲಕ ಟೀಂ ಇಂಡಿಯಾದ ಅದ್ಬುತ ವಿಜಯಕ್ಕೆ ಕಾರಣರಾದ ದೀಪಕ್ ಚಹರ್ ಬಗ್ಗೆ ಪ್ರಶಂಸೆಯ ಸುರಿಮಳೆಯಾಗುತ್ತಿರುವಾಗ, ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಒಂದು ಕುತೂಹಲಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ.

ಚಹರ್ .. ತಮ್ಮ 16ನೇ ವಯಸ್ಸಿನಲ್ಲಿ (2008) ರಾಜಸ್ಥಾನ್ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ಥಾನ ಪಡೆದುಕೊಂಡಾಗ ಅಕಾಡೆಮಿ ನಿರ್ದೇಶಕರಾಗಿದ್ದ ಗ್ರೆಗ್ ಚಾಪೆಲ್ ….. ಆತನ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಕ್ರಿಕೆಟ್‌ಗೆ ಅನರ್ಹನೆಂದು ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ. ಗ್ರೆಗ್‌ ಚಾಪಲ್‌ ರಂತಹ ವ್ಯಕ್ತಿ ಬೌಲಿಂಗ್‌ ನಲ್ಲಿ ಶಕ್ತಿಯಿಲ್ಲ, ಕ್ರಿಕೆಟ್‌ನಲ್ಲಿ ಆತನಿಗೆ ಭವಿಷ್ಯವಿಲ್ಲ ಎಂದು ಹೇಳಿದ್ದಾಗ ಸಹಜವಾಗಿ ಚಹರ್ ನಿರಾಶೆಗೊಂಡಿದ್ದರು. ಆದರೆ, ತಂದೆ ಲೋಕೇಂದ್ರ ಸಿಂಗ್‌ ಚಾಹರ್‌ ಸಹಾಯದಿಂದ ಅವರು ಮತ್ತೆ ಹಳಿಗೆ ಬಂದರು ಎಂದು ವಿವರಿಸಿದ್ದಾರೆ.

ಆದರೆ, ಅಂದು ಚಾಪೆಲ್ …. ದೀಪಕ್ ಚಹರ್ ಬಗ್ಗೆ ನೀಡಿದ್ದ ಹೇಳಿಕೆಗೆ ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯಿಸಿ ವಿದೇಶಿ ತರಬೇತುದಾರರು ಹೇಳುವ ಎಲ್ಲವನ್ನೂ ಕುರುಡಾಗಿ ನಂಬಬಾರದು, ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು. ಅವರ ಎತ್ತರದ ಕಾರಣದಿಂದಾಗಿ ಅಂದು ಕ್ರಿಕೆಟ್‌ಗೆ ನಿಷ್ಪ್ರಯೋಜಕನಾಗಿದ್ದ ವ್ಯಕ್ತಿ. ಇಂದು ರಾತ್ರಿ ಬೆಳಗಾಗುವುದರೊಂದಿಗೆ ಹೀರೋ ಆಗಿದ್ದಾರೆ. ಅದೇ ಚಾಪಲ್‌ ಮಾತು ನಂಬಿ ಆಯ್ಕೆದಾರರು ಚಾಹರ್‌ ಗೆ ಅವಕಾಶ ನಿರಾಕರಿಸಿದ್ದರೆ ಟೀ ಇಂಡಿಯಾ ಒಬ್ಬ ಉತ್ತಮ ಅಲ್‌ ರೌಂಡರ್‌ ಸೇವೆ ಕಳೆದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ಇನ್ನಾದರೂ ಬಿಸಿಸಿಐ .. ವಿದೇಶಿ ತರಬೇತುದಾರರ ತನ್ನ ವ್ಯಾಮೋಹಕ್ಕೆ ಕಡಿವಾಣ ಹಾಕಬೇಕು, ಅವರ ಮಾತನ್ನು ಪೂರ್ಣವಾಗಿ ಅವಲಂಭಿಸದೆ ಪ್ರತಿಭಾವಂತ ಯುವ ಆಟಗಾರರನ್ನು ಪ್ರೋತ್ಸಾಹಿಸಬೇಕು ಎಂದು ಸೂಚಿಸಿದ್ದಾರೆ. ವಿದೇಶಿ ತರಬೇತುದಾರರಿಗೆ ಹೋಲಿಸಿದರೆ ದೇಶಿಯ ಕೋಚ್‌ ಗಳು ಭಾರತೀಯ ಯುವ ಕ್ರಿಕೆಟಿಗರ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರುತ್ತಾರೆ. ಹಾಗಾಗಿ ಬಿಸಿಸಿಐ ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ದೇಶೀಯ ತರಬೇತುದಾರರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ನಡುವೆ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಚಹರ್ ತಮ್ಮ ಆಲ್‌ ರೌಡಂಡ್‌ ಪ್ರತಿಭೆಯಿಂದ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು.

, ,

Leave a Reply

Your email address will not be published. Required fields are marked *