ಇಸ್ರೇಲ್‌ ವೈಮಾನಿಕ ದಾಳಿಗೆ ತತ್ತರಿಸಿದ ಗಾಜಾ ಪ್ರದೇಶ

ಇಸ್ರೇಲ್‌ ವೈಮಾನಿಕ ದಾಳಿಗೆ ತತ್ತರಿಸಿದ ಗಾಜಾ ಪ್ರದೇಶ

ಟೆಲ್‌ ಅವೀವ್‌, ಜೂನ್‌ 16  ಗಾಜಾ ಪಟ್ಟಿ ಪ್ರದೇಶದಲ್ಲಿರುವ ಹಮಾಸ್‌ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಘೋಷಿಸಿದೆ.

ಗಾಜಾ ಪಟ್ಟಿಯಿಂದ ಬೆಂಕಿ ಜ್ವಾಲೆ ಸೃಷ್ಟಿಸುವ ಬಲೂನ್‌ಗಳು ತಮ್ಮ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ತಾವು ದಾಳಿ ನಡೆಸಿದ್ದೇವೆ ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿದೆ.

ಬುಧವಾರ ಮುಂಜಾನೆ ನಡೆಸಿದ ಇಸ್ರೇಲ್‌ ವೈಮಾನಿಕ ದಾಳಿಗಳ ವೇಳೆ ಸಂಭವಿಸಿದ ಸ್ಫೋಟಗಳಿಂದ ಇಡೀ ಗಾಜಾ ಪ್ರದೇಶ ತತ್ತರಿಸಿದೆ.
ನಮ್ಮ ಯುದ್ಧ ವಿಮಾನಗಳು ಖಾನ್ ಯೂನುಸ್ ಹಾಗೂ ಗಾಜಾ ನಗರದ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಹೇಳಿದೆ.

“ಹಮಾಸ್ ಆವರಣದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಗಾಜಾ ಪಟ್ಟಿಯಿಂದ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಹೋರಾಡಲು, ಯುದ್ಧವನ್ನು ಪುನರಾರಂಭಿಸುವ ಜೊತೆಗೆ ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಸಿದ್ದವಾಗಿರುವಂತೆ ಐಡಿಎಫ್ ಯೋಧರಿಗೆ ನೀಡಿರುವ ಸೂಚನೆಯಲ್ಲಿ ತಿಳಿಸಿದೆ.

ಇಸ್ರೇಲ್‌ ವೈಮಾನಿಕ ದಾಳಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದೆಯೇ , ಇಲ್ಲವೆ ಎಂಬುದು ಈವರೆಗಗೂ ಸ್ಪಷ್ಟವಾಗಿಲ್ಲ.
ಇಸ್ರೇಲ್‌ನಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಇಸ್ರೇಲ್ -ಹಮಾಸ್ ನಡುವೆ ಇದೇ ಮೊದಲ ಬಾರಿಗೆ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿವೆ.

ಮೇ ತಿಂಗಳಲ್ಲಿ ಇಸ್ರೇಲ್-‌ಪ್ಯಾಲಿಸ್ಟೇನ್‌ ನಡುವೆ 11 ದಿನಗಳ ಕಾಲ ಭೀಕರ ಯುದ್ಧ ನಡೆದಿತ್ತು. ನಂತರ ಮೇ 21 ರಂದು ಕದನ ವಿರಾಮ ಘೋಷಿಸಲಾಗಿತ್ತು.

ಇದಕ್ಕೂ ಮುನ್ನ ಮಂಗಳವಾರ, ಯಹೂದಿ ರಾಷ್ಟ್ರೀಯವಾದಿಗಳು ಇಸ್ರೇಲ್‌ ನಿಯಂತ್ರಣದಲ್ಲಿರುವ ಪೂರ್ವ ಜೆರುಸಲೆಮ್‌ ನಲ್ಲಿ ಭಾರಿ ಮೆರವಣಿಗೆ ನಡೆಸಿದ್ದರು. ಆ ನಂತರ ಗಾಜಾದಲ್ಲಿ ಹಮಾಸ್‌ಉಗ್ರಗಾಮಿ ಗುಂಪಿನಿಂದ ಬೆದರಿಕೆಗಳು ಬಂದಿದ್ದವು.

 

, ,

Leave a Reply

Your email address will not be published. Required fields are marked *