ಗಾಂಧೀಜಿ ಮಹಿಳಾ ವಿಚಾರಧಾರೆ

ಫೇಸ್ಬುಕ್ ಲೇಖನ

ಅದೊಂದು ದಿನ ಗಾಂಧಿ ಬಂಧನಕ್ಕೆ ಒಳಗಾಗಿ ಕಾರಾಗೃಹದತ್ತ ನಡೆಯುತ್ತಿದ್ದರು. ಆಗ ಗಾಂಧೀಜಿ ಜೊತೆಗಿದ್ದ ಕಾಕಾ ಸಾಹೇಬ್ ಕಾಲೇಲ್ಕರ್ ಮಕ್ಕಳಿಗಾಗಿ ಒಂದು ಪ್ರಾಥಮಿಕ ಪುಸ್ತಕ ಬರೆಯುವಂತೆ ಕೋರಿದರು. ಗಾಂಧಿ ಅದನ್ನು ರಚಿಸಿಕೊಟ್ಟರು. ಈ ಪ್ರಾಥಮಿಕ ಪಾಠ ಗಾಂಧಿ ನಿರ್ಮಿಸಲು ಹೊರಟ ಹೊಸ ಸಮಾಜದ ಬಗ್ಗೆ ಬಹುದೊಡ್ಡ ಒಳನೋಟ ನೀಡುತ್ತದೆ. ಕಲಿಕೆಯ ಅಗತ್ಯವನ್ನು ಅರಿಯದ, ಲಿಂಗಬೇಧ, ತಾರತಮ್ಯ ಮಾಡುವ ಹೆಣ್ಣುಮಕ್ಕಳು, ಗಂಡುಮಕ್ಕಳು ಮತ್ತು ತಂದೆತಾಯಿಯವರು ಕಲಿಯಬೇಕಾದ ಮೊದಲ ಪಾಠ ಇದು.

ಅದರಲ್ಲಿನ ಒಂದು ಪಾಠ ಹೀಗಿದೆ… ಮನೆಗೆಲಸದ ಬಗ್ಗೆ ಮಾತನಾಡುತ್ತ ತಾಯಿ, ಮಗ ಮತ್ತು ಮಗಳ ಸಂಭಾಷಣೆ..
ತಾಯಿ : ಮಗು, ನಿನ್ನ ಸಹೋದರಿಯ ಹಾಗೆ ನೀನೂ ಮನೆಗೆಲಸದಲ್ಲಿ ಸಹಾಯ ಮಾಡಬೇಕು.
ಮಗ: ಅಮ್ಮ ಅವಳು ಹುಡುಗಿ, ನಾನು ಹುಡುಗ. ಹುಡುಗ ಆಟ ಆಡುತ್ತಾನೆ ಮತ್ತು ಶಾಲೆ ಕಲಿಯುತ್ತಾನೆ ಅಷ್ಟೇ.
ಮಗಳು: ಅದ್ಹೇಗೆ? ನನಗೂ ಆಡಲು, ಕಲಿಯಲು ಇಷ್ಟ.
ಮಗ: ಇರಬಹುದು, ಆದರೆ ತಂಗಿ ನೀನು ಮನೆಗೆಲಸ ಮಾಡಬೇಕು, ಅಲ್ಲವೇ?
ತಾಯಿ: ಗಂಡು ಹುಡುಗ ಮನೆಗೆಲಸ ಮಾಡಬಾರದೇ?

ಮಗ: ಹುಡುಗ ಬೆಳೆದು ದೊಡ್ಡವನಾದ ಮೇಲೆ ಸಂಪಾದನೆ ಮಾಡುತ್ತಾನೆ. ಹಾಗಾಗಿ ಅವನು ಚೆನ್ನಾಗಿ ಕಲಿಯಬೇಕು.
ತಾಯಿ: ನೀನು ತಪ್ಪು ತಿಳಿದಿದ್ದಿ ಮಗು, ಹೆಂಗಸರೂ ಮನೆಗೆ ಸಂಪಾದನೆ ಮಾಡುತ್ತಾರೆ. ನೀನು ಮನೆಗೆಲಸದಲ್ಲಿ ಕಲಿಯಬೇಕಾದದ್ದು ತುಂಬ ಇದೆ. ಮನೆಯನ್ನು ಚೊಕ್ಕವಾಗಿಡು ವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಇದನ್ನು ಕಲಿಯಲು ಕೌಶಲ್ಯ ಬೇಕು, ನಿನ್ನ ಕಣ್ಣು, ಕೈ ಮತ್ತು ಬುದ್ಧಿಯ ಬಳಕೆ ಇಲ್ಲಿ ಅಗತ್ಯ. ಈ ಕೆಲಸಗಳು ನಿನ್ನನ್ನು ತಿದ್ದು ತ್ತವೆ. ನಿನ್ನ ಚಾರಿತ್ರ್ಯವನ್ನು ಬೆಳೆಸುತ್ತವೆ. ಗಂಡಸರು, ಹೆಂಗಸರು ಇಬ್ಬರೂ ಮನೆಗೆಲಸ ಮಾಡುವುದರಲ್ಲಿ ಸಮಾನ ನೈಪುಣ್ಯ ಗಳಿಸಬೇಕು, ಏಕೆಂದರೆ ಮನೆ ಇಬ್ಬರಿಗೂ ಸೇರಿ ದ್ದು.

ಗಾಂಧೀಜಿ ಬಹುಮುಖಿ ವ್ಯಕ್ತಿತ್ವ ಉಳ್ಳ ಚಿಂತಕರಾಗಿದ್ದು, ಅವರ ಚಿಂತನೆಗಳಲ್ಲೂ ಸ್ತ್ರೀ ಪುರುಷ ಸಮಾನತೆ ಆಧರಿಸಿದ ಸಮ ಸಮಾಜವೂ ಒಂದಾಗಿತ್ತು.

– ರವಿಚಂದ್ರ ಜಗಣ್ಣವರ್

Leave a Reply

Your email address will not be published. Required fields are marked *