ಇಂಧನ ದರ ಮತ್ತೆ ಏರಿಕೆ; ಬೆಂಗಳೂರಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 99.89 ರೂ.

ಇಂಧನ ದರ ಮತ್ತೆ ಏರಿಕೆ; ಬೆಂಗಳೂರಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 99.89 ರೂ.

ಬೆಂಗಳೂರು:  ಇಂಧನ ಬೆಲೆ ಇಂದು ಮತ್ತೆ ಹೆಚ್ಚಳವಾದ ಪರಿಣಾಮ ಡೀಸೆಲ್ ಬೆಲೆಯೂ ಲೀಟರ್ ಗೆ ನೂರು ರೂಪಾಯಿಗೆ ಸಮೀಪಿಸಿದೆ. ಅದೇ ರೀತಿ ಉದ್ಯಾನನಗರಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಬೆಲೆ 99.89 ರೂ. ಏರಿಕೆಯಾಗಿದ್ದು, ನೂರು ರೂಪಾಯಿಯತ್ತ ದಾಪುಗಾಲಿರಿಸಿದೆ ಎಂದು ವರದಿ ತಿಳಿಸಿದೆ.

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 13-14 ಪೈಸೆ ಏರಿಕೆಯಾಗಿದೆ ಎಂದು ರಾಜ್ಯ ಸ್ವಾಮಿತ್ವದ ಇಂಧನ ಮಾರಾಟಗಾರರ ಕಂಪನಿಯ ಪ್ರಕಟಣೆ ತಿಳಿಸಿದೆ. ಬೆಲೆ ಏರಿಕೆಯೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಳವಾದಂತಾಗಿದೆ.

ಬೆಂಗಳೂರಿನಲ್ಲಿ ಡೀಸೆಲ್ ಲೀಟರ್ ಗೆ 92.66 ರೂ. ಏರಿಕೆಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್​ಗೆ 87.41 ರೂ. ಇದೆ. ಚೆನ್ನೈನಲ್ಲಿ 92.04 ರೂ, ಮುಂಬೈನಲ್ಲಿ 94.84 ರೂ, ಬೆಂಗಳೂರಿನಲ್ಲಿ 92.66 ರೂ, ಹೈದರಾಬಾದ್​ನಲ್ಲಿ 95.28 ರೂ. ಇದೆ.

,

Leave a Reply

Your email address will not be published. Required fields are marked *