ನೂತನ ಸೈಕಲ್ ಗಳನ್ನು ನೀಡುವುದಾಗಿ ನಂಬಿಸಿ ವಂಚನೆ

ಮಧುಗಿರಿ:- ನೂತನ ಸೈಕಲ್ ಗಳನ್ನು ನೀಡುವುದಾಗಿ ನಂಬಿಸಿ ದೂರವಾಣಿ ಮೂಲಕ ಕರೆ ಮಾಡಿ 40 ಸಾವಿರ ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ಸೈಕಲ್ ಗಳನ್ನು ನೀಡದೆ ಮತ್ತು ಹಣವನ್ನೂ ಹಿಂದಿರುಗಿಸದೆ ವಂಚನೆ ಮಾಡಿದ್ದ ವ್ಯಕ್ತಿ ವಿರುದ್ಧ ತುಮಕೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದ ಪ್ರಕರಣದ ಆರೋಪಿಯ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಆರೋಪಿ 3 ಕಂತುಗಳಲ್ಲಿ ಹಣವನ್ನು ದೂರುದಾರರ ಖಾತೆಗೆ ವರ್ಗಾಯಿಸಿರುವ ಘಟನೆ ನಡೆದಿದೆ.
ದೂರಿನ ವಿವರ:- 2021ರ ಮಾರ್ಚಿ-20 ರಂದು ಎಂ.ಪಿ.ಶ್ರೀಕಾಂತ್ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿ : 2020 ನವೆಂಬರ್ -24ರಂದು ಸಾಯಂಕಲ 6:25 ಗಂಟೆಗೆ ದೂರುದಾರರ ಮೊ , ನಂ : 7899490527 ಗೆ 9877438221 ನಿಂದ ಕರೆ ಮಾಡಿ ನಿಮಗೆ ಸೈಕಲ್ ಕಳುಹಿಸುತ್ತೇವೆ ಎಂದು ವಾಟ್ಸಪ್ ಮೂಲಕ ಕಾಟ್ ಲಾಗ್ ಕಳುಹಿಸಿದರು . ಅದನ್ನು ನಂಬಿ 2020 ರ ನವೆಂಬರ್ 25 ಮಧ್ಯಾಹ್ನ 1:17 ಗಂಟೆಗೆ ಕರ್ನಾಟಕ ಬ್ಯಾಂಕ್ ನ ಮಧುಗಿರಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ : 4612500103338901 ಯಿಂದ ಬ್ಯಾಂಕ್ ಆಫ್ ಬರೋಡ ಖಾತೆ ಸಂಖ್ಯೆ : 4585020000104 ರ ಖಾತೆಗೆ ರೂ : 40,000 / -ಗಳನ್ನು ಗೂಗಲ್ ಪೇ ಮೂಲಕ ಹಣವನ್ನು ವರ್ಗಾಯಿಸಿರುತ್ತೇನೆ , ನಂತರ ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲಾ..ಆದರಿಂದ ನನ್ನ ಹವನ್ನು ಪತ್ತೆ ಮಾಡಿ ಕೊಡಬೇಕೆಂದು ದೂರನ್ನು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್‌ಪೆಕ್ಟರ್ ಎಂ.ವಿ.ಶೇಷಾದ್ರಿ ತನಿಖೆ ನಡೆಸಿ ಹಣ ಕೊಡಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. .

Leave a Reply

Your email address will not be published. Required fields are marked *