ಒಂದೆರಡು ದಿನಗಳಲ್ಲಿಯೇ ರಕ್ತ ಶುದ್ಧೀಕರಿಸುವ ಆಹಾರಗಳು!

ಆರೋಗ್ಯ ಕಾಲ

ನಮ್ಮ ದೇಹದ ಅತ್ಯಂತ ಪ್ರಮುಖ ದ್ರವವೆಂದರೆ ರಕ್ತ. ಇದನ್ನು ಬದಲಿಸಲು ಬೇರಾವುದೇ ದ್ರವದಿಂದ ಸಾಧ್ಯವಿಲ್ಲ. ಅಲ್ಲದೇ ಅತಿ ಕಡಿಮೆ ಆರೈಕೆ ಪಡೆಯುವ ದ್ರವವೂ ಆಗಿದೆ. ಶರೀರದ ಎಲ್ಲಾ ಜೀವಕೋಶಗಳಿಗೆ ಶಕ್ತಿ ಮತ್ತು ಆಮ್ಲಜನಕ ಒದಗಿಸಿ ಕಲ್ಮಶಗಳನ್ನು ವಿಸರ್ಜಿಸುವ ರಕ್ತವೂ ಕೆಲವೊಮ್ಮೆ ಮಲಿನಗೊಳ್ಳುತ್ತದೆ. ರಕ್ತ ಮಲಿನಗೊಂಡ ಸೂಚನೆ ಯನ್ನು ದೇಹ ಆಗಾಗ ನೀಡುತ್ತಿರುತ್ತದೆ. ಈ ಸೂಚನೆಗಳನ್ನು ಎಂದಿಗೂ ಅಲಕ್ಷಿಸಕೂಡದು.

ರಕ್ತದ ಗುಣಮಟ್ಟ ಉತ್ತಮವಾಗಿರಬೇಕಾದರೆ ಮಲಿನಗೊಂಡ ರಕ್ತವನ್ನು ಶುದ್ಧೀಕರಿಸುತ್ತಾ ಇರಬೇಕಾಗುತ್ತದೆ. ಶುದ್ಧ ರಕ್ತದಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ರಕ್ತವನ್ನು ಶುದ್ಧೀಕರಿಸುವ ಮೂಲಕ ಮೂತ್ರಪಿಂಡಗಳ ಮೇಲೆ ಬೀಳುವ ಒತ್ತಡವನ್ನೂ ಕಡಿಮೆ ಮಾಡಿದಂತಾಗುತ್ತದೆ. ಅಷ್ಟೇ ಅಲ್ಲ, ರಕ್ತ ಶುದ್ಧೀಕರಣದಿಂದ ಇನ್ನೂ ಹಲವಾರು ಉಪಯೋ ಗಗಳಿವೆ. ರಕ್ತ ಶುದ್ಧ ಮತ್ತು ಆರೋಗ್ಯಕರವಾಗಿದ್ದಷ್ಟೂ ದೇಹದ ಎಲ್ಲಾ ಅಂಗಾಂಗಗಳು ಆರೋಗ್ಯಕರವಾಗಿದ್ದು ಘಾಸಿಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ.

ರಕ್ತ ಶುದ್ಧೀಕರಣದ ಮೂಲಕ ಕಲ್ಮಶಗಳನ್ನು ಹೊರಹಾಕಿದರೆ ಇದರ ಮೂಲಕ ಎದುರಾಗುವ ತಲೆನೋವು, ಹಠಾತ್ತಾಗಿ ಆವರಿಸುವ ಅಲರ್ಜಿ, ಸುಸ್ತು, ಸುಲಭವಾಗಿ ರೋಗ ಗಳಿಗೆ ತುತ್ತಾಗುವುದು, ಮೊಡವೆಗಳು, ಚರ್ಮದ ಬಣ್ಣ ಕಾಂತಿರಹಿತವಾಗುವುದು, ಚರ್ಮ ಬಿರಿ ಬಿಡುವುದು ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ. ಬನ್ನಿ, ರಕ್ತ ಶುದ್ಧೀ ಕರಣವನ್ನು ಸುಲಭವಾಗಿಸುವ ಕೆಲವು ಅದ್ಭುತ ಆಹಾರಗಳ ಬಗ್ಗೆ ಈಗ ಅರಿಯೋಣ…

ಬೆಳ್ಳುಳ್ಳಿ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಖನಿಜಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಹಾಗೂ ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಒಂದೆರಡು ಹಸಿ ಬೆಳ್ಳುಳ್ಳಿ ಎಸಳನ್ನು ದಿನಕ್ಕೊಂದು ಬಾರಿಯಾದರೂ ಆಹಾರದೊಡನೆ ಸೇವಿಸಲು ಸಲಹೆ ನೀಡಲಾಗುತ್ತದೆ.

ಅರಿಶಿನ
ಇದು ಒಂದು ಉತ್ತಮವಾದ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಹಾಗೂ ಒತ್ತಡನಿವಾರಕವಾಗಿದೆ. ಅಲ್ಲದೇ ಇದೊಂದು ಉತ್ತಮ ರಕ್ತ ಶುದ್ಧೀಕಾರಕವೂ ಆಗಿದೆ. ನಿತ್ಯವೂ ಆಹಾರದಲ್ಲಿ ಅರಿಸಿನವನ್ನು ಸೇವಿಸುವ ಮೂಲಕ ರಕ್ತವನ್ನು ಶುದ್ಧವಾಗಿಟ್ಟುಕೊಳ್ಳಬಹುದು.

ತುಳಸಿ
ಇವೆರಡೂ ಎಲೆಗಳಲ್ಲಿ ರಕ್ತವನ್ನು ಶುದ್ದೀಕರಿಸುವ ಉತ್ತಮ ಪೋಷಕಾಂಶಗಳಿವೆ ಹಾಗೂ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಇವುಗ ಳಲ್ಲಿರುವ ವಿಟಮಿನ್ ಎ,ಸಿ ಮತ್ತು ವಿಶೇಷವಾಗಿ ವಿಟಮಿನ್ ಕೆ ಹಾಗೂ ಫೋಲೇಟ್ ಗಳು ರಕ್ತ ಶುದ್ದೀಕರಿಸಲು ನೆರವಾಗುತ್ತದೆ. ಈ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿ ಯಾ ನಿವಾರಕ ಹಾಗೂ ಒತ್ತಡ ನಿವಾರಕ ಗುಣಗಳಿವೆ. ಈ ಎಲೆಗಳನ್ನು ಕೊಂಚವೇ ನಿತ್ಯವೂ ಸೇವಿಸುವ ಮೂಲಕ ರಕ್ತವನ್ನು ಅತ್ಯುತ್ತಮವಾಗಿ ಶುದ್ಧೀಕರಿಸಬಹುದು. ರಕ್ತ ಶುದ್ಧೀಕರಣಕ್ಕೆ ತುಳಸಿ ಅತ್ಯುತ್ತಮವಾದ ಆಹಾರವಾಗಿದೆ.

ಮೆಣಸು
ಈ ಮೆಣಸಿನಲ್ಲಿ ವಿಟಮಿನ್ ಅ, ಆ, ಇ, ಉ ಹಾಗೂ ಓ ಇವೆ. ಅಲ್ಲದೇ ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಸಹಾ ಇವೆ. ಇವೆಲ್ಲವೂ ರಕ್ತ ಶುದ್ಧೀಕರಣದಲ್ಲಿ ನೆರವಾಗುತ್ತವೆ. ಇದರಿಂದ ನಿತ್ಯದ ಆಹಾರದಲ್ಲಿ ಈ ಮೆಣಸಿಗೂ ಸ್ಥಾನ ನೀಡುವುದು ಆರೋಗ್ಯಕ್ಕೆ ಪೂರಕವಾಗಿದೆ. ಗಜ್ಜರಿ ಅಥವಾ ಕ್ಯಾರೆಟ್ಟುಗಳಲ್ಲಿ ಸಹಾ ಉತ್ತಮ ಪೋಷಕಾಂಶಗಳಿದ್ದು ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತವೆ. ಅಲ್ಲದೇ ಚರ್ಮ, ಕೂದಲು ಹಾಗೂ ಕಣ್ಣುಗಳಿಗೂ ಕ್ಯಾರೆಟ್ ಉತ್ತಮ ಆಹಾರವಾಗಿದೆ.

ರಕ್ತ ಶುದ್ಧೀಕರಣಕ್ಕೆ ಹಾಗಲಕಾಯಿ ಉತ್ತಮ ಆಹಾರವಾಗಿದೆ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಮತೋಲನದಲ್ಲಿರಲು ನೆರವಾಗುತ್ತದೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಕಾರಣಕ್ಕೆ ಇದಕ್ಕೆ ಅದ್ಭುತ ಆಹಾರದ ಪಟ್ಟವೂ ದೊರಕಿದೆ. ತರಕಾರಿಯಲ್ಲಿ ವಿಟಮಿನ್ ಎ,ಬಿ,ಸಿ ಹಾಗೂ ಕೆ, ಫೋಲಿಕ್ ಆಮ್ಲ ಹಾಗೂ ಉತ್ತಮ ಪ್ರಮಾಣದ ಕರಗುವ ನಾರು ಸಹಾ ಇವೆ. ಇವೆಲ್ಲವೂ ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತವೆ.

ಅಡುಗೆಮನೆಯ ಬೆಳ್ಳುಳ್ಳಿ ಎಷ್ಟು ಹೊಗಳಿದರೂ ಸಾಲದು!

ಪ್ರತಿಯೊಂದು ಅಡುಗೆ ಮನೆಯಲ್ಲೂ ಸಿಗುವ ಬೆಳ್ಳುಳ್ಳಿಯನ್ನು ಖಾದ್ಯಕ್ಕೆ ರುಚಿ ಹಾಗೂ ಸುವಾಸನೆ ಹೆಚ್ಚಿಸಲು ಬಳಸಿಕೊಳ್ಳಲಾಗುತ್ತದೆ. ಆದರೆ, ಹಿಂದಿನಿಂದಲೂ ಭಾರತೀಯರು ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಲಾಭಗಳನ್ನು ತಿಳಿದುಕೊಂಡು ವಿವಿಧ ರೀತಿಯಿಂದ ಅದನ್ನು ಬಳಸಿಕೊಂಡು ಬರುತ್ತಾ ಇದ್ದಾರೆ. ಹೆಚ್ಚಿನ ಆಯುರ್ವೇದ ಔಷಧಿಗಳಿಗೂ ಬೆಳ್ಳುಳ್ಳಿ ಬಳಸಲಾಗುತ್ತದೆ.

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವು ಪ್ರತಿಜೀವಕದಂತೆ ಕೆಲಸ ಮಾಡುವುದು ಮಾತ್ರವಲ್ಲದೆ ಹಲವಾರು ರೀತಿಯ ಸೋಂಕು ನಿವಾರಿಸುವುದು. ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ವಿಟಮಿನ್ ಬಿ6, ಕಬ್ಬಿನಾಂಶ ಮತ್ತು ಪೊಟಾಶಿಯಂನಂತಹ ಹಲವಾರು ಪೋಷಕಾಂಶಗಳು ಇದೆ. ಪ್ರತಿನಿತ್ಯವೂ ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ದೇಹದ ಪ್ರತಿ ರೋಧಕ ಶಕ್ತಿ ಹೆಚ್ಚಾಗುವುದು. ಈ ಲೇಖನದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವಂತಹ ಕಾಲಿನ ಶಿಲೀಂಧ್ರ ಸಮಸ್ಯೆಯನ್ನು ಬೆಳ್ಳುಳ್ಳಿಯಿಂದ ನಿವಾರಣೆ ಸಾಧ್ಯ.

*3-6 ಬೆಳ್ಳುಳ್ಳಿ ಎಸಲುಗಳನ್ನು ತೆಗೆದುಕೊಂಡು ಸರಿಯಾಗಿ ಜಜ್ಜಿ ಪೇಸ್ಟ್ ಮಾಡಿ.
*ಇದಕ್ಕೆ ಒಂದು ಚಮಚ ಆಲಿವ್ ತೈಲ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
*ಹತ್ತಿ ಉಂಡೆ ಬಳಸಿ ಈ ಔಷಧಿಯನ್ನು ಕಾಲಿನ ಭಾದಿತ ಭಾಗಗಳಿಗೆ ಹಚ್ಚಿಕೊಳ್ಳಿ.
*ದಿನದಲ್ಲಿ 2-3 ಸಲ ಇದನ್ನು ಹಚ್ಚಿಕೊಳ್ಳಿ ಅಥವಾ ಸೋಂಕು ಕಡಿಮೆಯಾಗುವ ತನಕ ಮುಂದುವರಿಸಿ.

ಬೆಳ್ಳುಳ್ಳಿ ಮತ್ತು ಅಲೋವೆರಾ
*ಒಂದು ತುಂಡು ತಾಜಾ ಅಲೋವೆರಾದಿಂದ ಅದರ ಲೋಳೆ ತೆಗೆಯಿರಿ.
*ಕೆಲವು ಬೆಳ್ಳುಳ್ಳಿ ಎಸಲುಗಳನ್ನು ಸರಿಯಾಗಿ ಜಜ್ಜಿಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ.
*ಇದಕ್ಕೆ ಅಲೋವೆರಾ ಲೋಳೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
*ಸೋಂಕು ತಾಗಿರುವ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ.
*ತಣ್ಣೀರಿನಿಂದ ಇದನ್ನು ತೊಳೆಯಿರಿ.
*ಒಳ್ಳೆಯ ಫಲಿತಾಂಶ ಪಡೆಯಲು ದಿನದಲ್ಲಿ ಎರಡು ಸಲ ಬಳಸಿ.

Leave a Reply

Your email address will not be published. Required fields are marked *