ದೇಶದ 13 ನಗರಗಳಿಗೆ ಪುಣೆಯಿಂದ ಕೋವಿಶೀಲ್ಡ್ ಲಸಿಕೆ ರವಾನೆ
ಪುಣೆ, ಜ 12 ದೇಶದ ಜನರಿಗೆ ಕೋವಿಡ್ ಲಸಿಕೆ ನೀಡುವ ಕೆಲಸ ಇದೆ ಶನಿವಾರದಿಂದ ಪ್ರಾರಂಭವಾಗಲಿದ್ದು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ನಿಂದ ದ ಕೋವಿಶೀಲ್ಡ್ ಲಸಿಕೆಯನ್ನು ಹೊಂದಿರುವ ಮೂರು ಕಂಟೈನರ್ ಗಳು ನಗರಗಳತ್ತ ಹೊರಟಿವೆ.
ತಾಪಮಾನ ನಿಯಂತ್ರಿತ ಮೂರು ಟ್ರಕ್ ಗಳಲ್ಲಿ ಕೋವಿಶೀಲ್ಡ್ ಲಸಿಕೆಗಳು ಹೊರಟಿದ್ದು, ಪುಣೆ ವಿಮಾನ ನಿಲ್ದಾಣದಿಂದ ಬೆಂಗಳೂರು ಸೇರಿದಂತೆ ದೇಶದ 13 ಪ್ರಮುಖ ನಗರಗಳಿಗೆ ಲಸಿಕೆ ಸರಬರಾಜಾಗಲಿದೆ.
ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಢ ಮತ್ತು ಭುವನೇಶ್ವರ ಸೇರಿದಂತೆ 13 ಸ್ಥಳಗಳಿಗೆ ಲಸಿಕೆ ತಲುಪಲಿವೆ.ಟ್ರಕ್ ಗಳು ಲಸಿಕೆಗಳ 478 ಪೆಟ್ಟಿಗೆಗಳನ್ನು ಹೊತ್ತೊಯ್ದಿದ್ದು, ಪ್ರತಿ ಪೆಟ್ಟಿಗೆಯ ತೂಕ 32 ಕೆ.ಜಿಯಿದೆ. ಇಂದೇ ಲಸಿಕೆ ಪೆಟ್ಟಿಗೆ ನಿಯೋಜಿತ ಸ್ಥಳಗಳಿಗೆ ತಲುಪಲಿದೆ.