ಶಿಗ್ಗಾಂವಿ,ಮೇ.26,ಉದಯಕಾಲ ನ್ಯೂಸ್: ಸಿಎಂ ಬಸವರಾಜ ಬೊಮ್ಮಾಯಿ ತವರಿನಲ್ಲಿ ಮತ್ತೊಮ್ಮೆ ಗುಂಡಿನದಾಳಿ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಮುಸುಕುಧಾರಿಗಳಿಂದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ.
ನಿನ್ನೆ ತಡರಾತ್ರಿ 11 ಘಂಟೆ ಸಮಯದಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಒಂದೇ ಕುಟುಂಬದ 14 ಜನರು ಅಪಾಯದಿಂದ ಪಾರಾಗಿದ್ದಾರೆ.
ಘಟನೆ:
ಗ್ರಾಮದ ಮಹಿಳೆ ಸಲ್ಮಾ ಮನೆಯ ಕಟ್ಟಿಯ ಮೇಲೆ ಕುಳತ್ತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಅದೆ ವೇಳೆಯಲ್ಲಿ ಕರೆಂಟ್ ಹೋಗಿದ್ದು ಕತ್ತಲಾಗಿದ್ದರಿಂದ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾಳೆ ಇದರಿಂದಾಗಿ ಮನೆಯ ಗೋಡೆಗೆ ಒಳಗೆ ಗುಂಡು ತಾಗಿದೆ ಹೀಗಾಗಿ ಗುಂಡಿನ ದಾಳಿ ಮಹಿಳೆ ಹಾಗೂ ಮಹಿಳೆ ಮನೆಯವರು 14 ಜನರು ಅಪಾಯದಿಂದ ಪಾರಾಗಿದ್ದಾರೆ.
ಗುಂಡಿನ ಸದ್ದು ಕೇಳಿ ಬೆಚ್ಚಿ ಬಿದ್ದ ಜನ
ರಾತ್ರಿ 11ಗಂಟೆಗೆ ಮುಸುಕುಧಾರಿಗಳ ಗುಂಡು ಹಾರಿಸಿದ ಸದ್ದು ಕೇಳಿ ಅಕ್ಕಪಕ್ಕದ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳೀಯರು ಸಲ್ಮಾ ಮನೆಮುಂದೆ ಜಮಾಯಿಸಿದ್ದರಿಂದ ಮುಸುಕುಧಾರಿಗಳು ತಕ್ಷಣ ಪರಾರಿಯಾಗಿದ್ದಾರೆ. ಈ ಹಿಂದೆ ಶಿಗ್ಗಾಂವಿ ರಾಜಶ್ರೀ ಚಿತ್ರ ಮಂದಿರದಲ್ಲಿ ಶೋಟೌಟ್ ಪ್ರಕರಣ ನಡೆದಿತ್ತು. ಪ್ರಕರಣ ಮಾಸುವ ಮುನ್ನವೇ ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದಲ್ಲಿ ಪೈರಿಂಗ್ ನಡೆದಿದೆ.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸೈಯದ್ ಅಜ್ಜಮಪೀರ್ ಖಾದ್ರಿ ಬೇಟಿ
ಮುಸುಕುಧಾರಿಗಳು ಸಲ್ಮಾ ಮೇಲೆ ಗುಂಡಿನದಾಳಿ ನಡೆಸಿರುವ ಘಟನೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸೈಯದ್ ಅಜ್ಜಮಪೀರ್ ಭೇಟಿ ನೀಡಿದರು. ಈ ವೇಳೆ ಕುಟುಂಬಸ್ಥರಿಗೆ ಧೈರ್ಯತುಂಬಿದರು. ಇದೇ ವೇಳೆ ಶೋಟೌಟ್ ಪ್ರಕರಣ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಪೋಲೀಸ್ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.