ರಷ್ಯಾದಲ್ಲಿ ಬೆಂಕಿ ದುರಂತ – ಮಗು ಸೇರಿ 8 ಜನರ ದುರ್ಮರಣ

ರಷ್ಯಾದಲ್ಲಿ ಬೆಂಕಿ ದುರಂತ – ಮಗು ಸೇರಿ 8 ಜನರ ದುರ್ಮರಣ
ಮಾಸ್ಕೋ, ಜನವರಿ 12 ರಷ್ಯಾದ ಯುರಲ್ಸ್ ನಗರ ಯೆಕಟೆರಿನ್‌ಬರ್ಗ್‌ನಲ್ಲಿನ ವಸತಿ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿ ದುರಂತದಲ್ಲಿ ಒಂದು ಮಗು ಸೇರಿದಂತೆ ಒಟ್ಟು 8 ಜನ ಜನರ ದುರ್ಮರಣಕ್ಕಿಡಾಗಿದ್ದಾರೆ.
ಈ ವಿಷಯವನ್ನು ಪ್ರಾದೇಶಿಕ ತುರ್ತು ಸೇವೆಗಳ ವಕ್ತಾರರು ಸ್ಪುಟ್ನಿಕ್ ಗೆ ತಿಳಿಸಿದ್ದಾರೆ. ಮೊದಲಿನ ವರದಿಗಳ ಪ್ರಕಾರ ರಾಸ್ವೆಟ್ನಾಯಾ ಬೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಆಗಮನದ ವೇಳೆಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟವಾದ ಹೊಗೆ ಅವರಿಸಿದೆ.
ಪರಿಹಾರ ಮತ್ತು ರಕ್ಷಣಾ ಸಿಬ್ಬಂದಿ ಕಟ್ಟಡದ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿ,ಸಾಹಸ ಮಾಡಿ ಕಡೆಗೆ 90 ಜನರನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ.

ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ಅಗ್ನಿಶಾಮಕದಳದ 30 ಸಿಬ್ಬಂದಿ ಭಾಗಿಯಾಗಿದ್ದರು. ಸದ್ಯದ ವರದಿಯ ಪ್ರಕಾರ ಒಂದು ಮಗು ಸೇರಿದಂತೆ 8 ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದೂ ವಕ್ತಾರರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *