ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹಬ್ಬದ ಮುಂಗಡ…!

ನವದೆಹಲಿ, ಅ ೧೨ ಕೊರೊನಾ ಸಾಂಕ್ರಾಮಿಕದಿಂದಾಗಿ ಆರ್ಥಿಕತೆ ಕುಸಿತದ ಸಂದರ್ಭದಲ್ಲಿ ಹಣದ ವಿನಿಮಯ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿದೆ. ಈ ಭಾಗವಾಗಿ ಕೇಂದ್ರ ಸರ್ಕಾರದ ನೌಕರಿಗಾಗಿ ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ. ಹಬ್ಬದ ಋ?ತುವಿನಲ್ಲಿ ಹಲವು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಟ್ರಾವೆಲ್ ಓಚರ್‌ಗಳ ಜೊತೆಗೆ ಪ್ರತಿ ಉದ್ಯೋಗಿಗೆ ಹಬ್ಬದ ಮುಂಗಡ ನೀಡಲಿದೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಸೋಮವಾರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ಪೈಕಿ ಎಲ್‌ಟಿಸಿ (ಲೀವ್ ಟ್ರಾವೆಲ್ ಕನ್ಸೇಷನ್) ಓಚರ್. ಪ್ರವಾಸ ಇಲ್ಲವೆ ಸ್ವಂತ ಊರುಗಳಿಗೆ ತೆರಳಲು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಎಲ್ ಟಿಸಿಗಳನ್ನು ನೀಡುತ್ತದೆ. ಆದರೆ ಪ್ರಸ್ತುತ ಸಂದರ್ಭಗಳಲ್ಲಿ ಪ್ರಯಾಣ ಆಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ರಿಯಾಯತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್‌ಟಿಸಿಗಳನ್ನು ನಗದು ಓಚರ್ ಗಳಿಗೆ ಪರಿವರ್ತಿಸಿದೆ. ಈ ಓಚರ್ ಗಳನ್ನು ೨೦೨೧ಮಾರ್ಚ್ ೩೧ ರವರೆಗೆ ನೌಕರರು ಬಳಸಬಹುದಾಗಿದೆ.

ಆದರೆ, ಲೀವ್ ಟ್ರಾವೆಲ್ ಕನ್ಸೇಷನ್ ಅಡಿ ನೀಡುವ ನಗದು ಓಚರ್ ಗಳಿಗೆ ಕೆಲ ನಿರ್ಬಂಧಗಳನ್ನು ವಿಧಿಸಿದೆ. ಉದ್ಯೋಗಿಗಳು ಕೇವಲ ಆಹಾರೇತರ ವಸ್ತುಗಳನ್ನು ಮಾತ್ರ ಖರೀದಿಸಬೇಕು. ಶೇ. ೧೨ ಕ್ಕಿಂತ ಹೆಚ್ಚು ಜಿಎಸ್ಟಿ ವಿನಾಯಿತಿ ಪಡೆದ ವಸ್ತುಗಳಾಗಿರಬೇಕು. ಜಿಎಸ್‌ಟಿ ನೋಂದಾಯಿತ ಮಳಿಗೆಗಳಲ್ಲಿ ಡಿಜಿಟಲ್ ರೂಪದಲ್ಲಿ ಮಾತ್ರ ಖರೀದಿಸಬೇಕು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಹಬ್ಬದ ಕೊಡುಗೆಯನ್ನು ಪ್ರಕಟಿಸಿದೆ. ಹಬ್ಬದ ಮುಂಗಡ ಅಡಿಯಲ್ಲಿ ಪ್ರತಿಯೊಬ್ಬ ಉದ್ಯೋಗಿಗೆ ರೂ. ೧೦,೦೦೦ ನೀಡಲಿದೆ. ಪ್ರಿಪೇಯ್ಡ್ ರೂಪೆ ಕಾರ್ಡ್‌ಗಳಲ್ಲಿ ಈ ಹಣ ಜಮಾ ಮಾಡಲಿದೆ. ಈ ಸೌಲಭ್ಯವನ್ನು ಮುಂದಿನ ವರ್ಷ ಮಾರ್ಚ್ ೩೧ ರೊಳಗೆ ಬಳಸಿಕೊಳ್ಳಬೇಕಾಗಿದೆ. ಈ ಮುಂಗಡವನ್ನು ಉದ್ಯೋಗಿಗಳು ೧೦ ಕಂತುಗಳಲ್ಲಿ ಮರುಪಾವತಿಸಬೇಕು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *