ಕೆಲಸಕ್ಕೆ ಬಾರದವರು ಕಣ್ರಿ!

ಫೇಸ್ಬುಕ್ ಲೇಖನ

ನಾನು ಈ ಬಾರಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ಮತ್ತೆ ಪ್ರಧಾನಿ ಸೀಟ್‌ನಲ್ಲಿ ನೋಡ್ಬೇಕು ಅನ್ನೋ ಆಸೆ, ಗುರಿ, ಕನಸು ಎಲ್ಲವೂ ಇದೆ. ಆದ್ರೆ ನಮ್ಮ ರಾಜ್ಯದ ನಾಲಾಯಕು ಎಂಪಿಗಳನ್ನು ಮತ್ತೆ ಗೆಲ್ಲಿಸಿ ಅವರಿಗೆ ಓಟು ಮಾಡಿ ಅದೇ ಸಂಸತ್ತಿಗೆ ಕಳಿಸ್ಬೇಕಲ್ಲ ಅನ್ನೋ ಕೊರಗಿದೆ. ಯಾಕಂದ್ರೆ ಯಾವ ಕೆಲಸಕ್ಕೂ ಉಪಯೋಗಕ್ಕೂ ಬಾರದವರವರು. ಕಾವೇರಿ ನೀರಿನ ವಿಚಾರದಲ್ಲಿ, ಮಹದಾಯಿ ವಿಚಾರದಲ್ಲಿ ಒಂದು ಕಿಂಚಿತ್ತು ಮಾತಾಡದವರಿಗೆ ನಾವು ಓಟಾಕ್ಕಬೇಕಲ್ಲ…?

ನೀರಿನ ಸಮಸ್ಯೆ, ರೈತರ ಸಮಸ್ಯೆಗಳಿಗೆ ಧ್ವನಿ ಎತ್ತದವರನ್ನು ನಾವು ಮತ್ತೆ ಗೆಲ್ಲಿಸ್ಬೇಕಲ್ಲ ಅನ್ನೋ ನೋವಿದೆ. ಒಬ್ಬಾಕೆ ಹೇಳ್ತಾಳೆ ಭಾಷಣದಲ್ಲಿ ನಮ್ಮ ಪಕ್ಷದವರನ್ನು ಜೈಲಿಗೆ ಹಾಕಿದ್ರೆ ಕರ್ನಾಟಕದಲ್ಲಿ ಬೆಂಕಿ ಹಚ್ಚುತ್ತೀವಿ ಅಂತ. ಮತ್ತೊಬ್ಬ ಪಾಪಾತ್ಮ ಹೇಳ್ತಾನೆ ಸಂವಿಧಾನವನ್ನೆ ತಿರುವಿ ಹಾಕ್ತೀನಿ ಅಂತ. ಇನ್ನೊಬ್ಬ (ಮೊಬೈಲ್‌ನಲ್ಲಿ ರೆಕಾರ್ಡ್ ಆದ ಹೇಳಿಕೆ) ಮೋದಿನ್ನೇ ನಮ್ಮ ಕಡೆ ಇದ್ದಾರೆ. ಸುಪ್ರೀಂ ಕೋರ್ಟ್‌ನ ಜಡ್‌ಜ್‌‌ಗಳು ನಮ್ಮವರೇ ನೀವು ಬಂದು ಬಿಡಿ. ನಾವು ಎಲ್ಲವನ್ನು ನೋಡ್ಕೋತ್ತೀವಿ ಅಂತ.

ಆದ್ರೆ ಇವರೆಲ್ಲರ ಹೇಳಿಕೆಗಳು ತಮ್ಮ ತಮ್ಮ ಸ್ವಾರ್ಥಕೊಸ್ಕರನ್ನೇ ವಿನಃ ಬೇರೆನು ಅಲ್ಲ. ಯಾವತ್ತಾದ್ರೂ ಕಾವೇರಿ ನೀರಿನ ಬಗ್ಗೆ, ಮಹಾದಾಯಿ ನೀರಿನ ಬಗ್ಗೆ ಮೋದಿಯವರ ಹತ್ತಿರ ಮಾತನಾಡಿದ್ದಾರಾ? ಇಲ್ಲ ಇವರ್ಯಾರು ಮೋದಿ ಹತ್ತಿರ ನಮ್ಮ ರಾಜ್ಯದಲ್ಲಿ ಆಗ್ತಾ ಇರೋ ರೈತರ ಸಮಸ್ಯೆಗಳ ಬಗ್ಗೆ ಒಂದು ಕಿಂಚಿತ್ತು ಮನಸ್ಸು ಮಾಡ ಲಿಲ್ಲ. ಅವರು ಮನಸ್ಸು ಮಾಡಿದ್ದು ಕೆಲಸ ಅಧಿಕಾರ, ಸೀಟಿಗಾಗಿ, ಆ ಸೀಟಿನ ಮಹಾತ್ಮ ಎಂತಹದ್ದು ಅಂದ್ರೆ ಕೋಟಿ, ಕೋಟಿ ಹಣವನ್ನು ಸುರಿಯೋ ಹಂಬಲ ಇದೆ ಕಂಡ್ರಿ ಆ ಸೀಟಿಗೆ…

ಅದ್ರೂ ಕೊನೆಯದಾಗಿ ಒಂದು ಮಾತು… ದೇಶಕ್ಕೆ ಮೋದಿ ಪ್ರಧಾನಿಯಾಗಲಿ. ರಾಜ್ಯದಿಂದ ಅಪ್ರಯೋಜಕ ಸಂಸದರು ಬೇಡ. ಅದು ಯಾವುದೇ ಪಕ್ಷದವರಾಗಿದ್ರು ಬೇಡ. ನಮಗೆ, ನಮ್ಮ ರಾಜ್ಯಕ್ಕೆ ನೀರಿಗಾಗಿ, ರೈತರಿಗಾಗಿ ಧ್ವನಿ ಎತ್ತಿ ಮಾತನಾಡುವಂತಹ ನಾಯಕರು ಬೇಕು. ಸಂಸತ್ತಿನಲ್ಲಿ ಹೆಂಗಸು ಅಲ್ಲ, ಗಂಡಸು ಅಲ್ಲ ಅನ್ನೋ ವ್ಯಕ್ತಿಗಳು ಚಪ್ಪಾಳೆ ತಟ್ಟುವಂತವರು ನಮಗೆ, ನಮ್ಮ ರಾಜ್ಯದ ರೈತರಿಗೆ ಬೇಡ. ವಿಶೇಷವಾಗಿ : ರೈತರ ಬಗ್ಗೆ ಕಾಳಜಿ ಇರುವಂತಹ ನಾಯಕರನ್ನು ಹೊರತು ಪಡಿಸಿ. ನಾನು ರೈತರ ಪರವಾಗಿ, ರೈತರ ಮಕ್ಕಳು ಅನ್ನೋ ಸುಳ್ಳು ಬುರುಕರಿಗಾಗಿ ಅಲ್ಲ. ರೈತರ ಹೆಸರನ್ನು ಹೇಳಿಕೊಂಡು ಬರುವ ಪ್ರಧಾನ ಮಂತ್ರಿ ಯಾರೇ ಆಗಿದ್ದರೂ ಅವರು ನಮಗೆ ಬೇಡ. ಜೈ ಜವಾನ್, ಜೈ ಕಿಸಾನ್….

  • ಶಿವಶಂಕರ ಪಿ.ವೀರಾಪುರ

Leave a Reply

Your email address will not be published. Required fields are marked *