ಸರ್ಕಾರಕ್ಕೆ ಯಡಿಯೂರಪ್ಪ ಸನ್ ಸ್ಟ್ರೋಕ್; ಎಚ್.ವಿಶ್ವನಾಥ್ ವಾಗ್ದಾಳಿ

ರಾಯಚೂರು, ಜ.14  ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲವಾಗಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಇಂದು ಕೂಡ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತು ತಪ್ಪಿದ್ದಾರೆ. ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಹಲವು ರಾಜಕೀಯ ಪಕ್ಷಗಳು ನಾಶವಾಗಿವೆ, ದೇಶದ ಅತಿದೊಡ್ಡ ಪಕ್ಷಗಳು ಕುಟುಂಬ ರಾಜಕಾರಣದಿಂದ ನಾಶವಾಗಿವೆ. 90ರ ದಶಕದಲ್ಲಿ ಜನತಾ ಪರಿವಾರ ಕೂಡ ಸನ್ ಸ್ಟ್ರೋಕ್ ನಿಂದಲೇ ಮುಗಿದು ಹೋಯಿತು. ಇದೀಗ ಬಿಜೆಪಿಯನ್ನು ಕೂಡ ಇದು ನಾಶಮಾಡಬಹುದು ಎಂದು ಎಚ್ಚರಿಸಿದರು.
ಇದಕ್ಕೆ ಹೈಕಮಾಂಡ್ ಅವಕಾಶ ನೀಡಬಾರದು. ಪ್ರಾದೇಶಿಕ ಪಕ್ಷ ಹಾಳಾಗುವುದಕ್ಕೂ, ರಾಷ್ಟ್ರೀಯ ಪಕ್ಷಗಳು ಹಾಳಾಗುವುದಕ್ಕೂ ವ್ಯತ್ಯಾಸವಿದೆ. ದೇಶದ ಹಿತದೃಷ್ಟಿಯಿಂದ ರಾಷ್ಟ್ರೀಯ ಪಕ್ಷಗಳು ಹಾಳಾಗಬಾರದು. ಕಾಂಗ್ರೆಸ್ ಕೂಡ ಸನ್ ಸ್ಟ್ರೋಕ್ ನಿಂದ ಹೊರಟುಹೋಯಿತು. ಸನ್ ಸ್ಟ್ರೋಕ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು ಎಂದು ಹೇಳಿದರು.
ಇದಕ್ಕಾಗಿಯೇ ನಾವು ದಂಗೆ ಎದ್ದು ಬಂದಿದ್ದಾ ?, ಸಚಿವ ಸ್ಥಾನ ತಮಗೆ ಸಿಗದಿದ್ದರೂ ಪರವಾಗಿಲ್ಲ, ನಿಮಗಾಗಿ ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ನೀಡಿಬೇಕಿತ್ತು, ಅಧಿಕಾರದ ಭಿಕ್ಷೆ ನೀಡಿದವರಿಗೆ ಮೋಸ ಮಾಡಲಾಗಿದೆ. ಮುನಿರತ್ನ ನಿಮಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಬಿಟ್ಟು ಬ್ರಹ್ಮಾಂಡ ಭ್ರಷ್ಟಾಚಾರವೆಸಗಿದ, ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿರುವ ವ್ಯಕ್ತಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಟೀಕಿಸಿದರು.
ಸಿ.ಡಿ.ಸ್ಪೋಟಗೊಂಡ ಬಳಿಕ ಎಲ್ಲವೂ ಬಹಿರಂಗವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೇಣುಕಾಚಾರ್ಯ ಅವರು ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಲಿದ್ದಾರೆ,. ತಾವು ಎಲ್ಲಿಗೂ ಹೋಗುವುದಿಲ್ಲ ಎಂದು ವಿಶ್ವನಾಥ್ ಹೇಳಿದರು,

Leave a Reply

Your email address will not be published. Required fields are marked *