ಡ್ರಗ್ ಪ್ರಕರಣ, ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರನ ಬಂಧನ
ಚನ್ನೈ , ಜ 12 ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ, ಕರ್ನಾಟಕದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯಾ ಆಳ್ವಾರನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಮೂರುವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ ಚೆನ್ನೈನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಕಳೆದ ರಾತ್ರಿ ಆಳ್ವಾರನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ, ಸಂಜನಾ ಬಂಧನದ ಬೆನ್ನಲ್ಲೇ ಆದಿತ್ಯ ಆಳ್ವ ಹೆಸರು ಕೂಡ ಕೇಳಿಬಂದಿತ್ತು. ಈ ಹಿನ್ನೆಲೆ ಸಿಸಿಬಿ ಆದಿತ್ಯ ಆಳ್ವಾ ಹಾಗೂ ಅವರ ಸಂಬಂಧಿ ಬಾಲಿವುಟ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಈ ಹಿಂದೆ ದಾಳಿ ನಡೆಸಿ ಪರೀಶೀಲನೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಎಫ್ಐಆರ್ ರದ್ದು ಕೋರಿ ಆರೋಪಿ ಆದಿತ್ಯಾ ಹೈಕೋರ್ಟ್ ಗೂ ಮನವಿ ಮಾಡಿದ್ದರು ಆದರೆ ಇದಕ್ಕೆ ಸಿಸಿಬಿ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತ್ತು.