ರೋಪ್ ವೇ ಕೈಬಿಟ್ಟಿದ್ದು ಸರಿಯಾದ ಕ್ರಮ- ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ಯೋಜನೆ ಕೈಬಿಟ್ಟ ಸರ್ಕಾರದ ನಿರ್ಧಾರ ಸರಿ ಇದೆ.
ಪರಿಸರ ಸಂರಕ್ಷಣೆಯ ಜತೆಗೆ ಚಾಮುಂಡಿ ಬೆಟ್ಟದ ಅಭಿವೃದ್ಧಿಯಾಗಬೇಕು. ಇದು ಪ್ರವಾಸಿ ತಾಣವಲ್ಲ, ಧಾರ್ಮಿಕ ಸ್ಥಳ.
ಇದನ್ನು ಹಾಗೇಯೇ ಸರ್ಕಾರ ಕಾಪಾಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಣಯ ಸರಿ ಇದೆ ಎಂದರು.