ಜಮ್ಮು ವಾಯುಪಡೆ ಕೇಂದ್ರ ಸಮೀಪ ಮತ್ತೆ ಡ್ರೋಣ್ ಪತ್ತೆ: ಕಟ್ಟೆಚ್ಚರಕ್ಕೆ ಸೂಚನೆ

ಜಮ್ಮು ವಾಯುಪಡೆ ಕೇಂದ್ರ ಸಮೀಪ ಮತ್ತೆ ಡ್ರೋಣ್ ಪತ್ತೆ: ಕಟ್ಟೆಚ್ಚರಕ್ಕೆ ಸೂಚನೆ

ಜಮ್ಮು, ಜುಲೈ 21– ಇಲ್ಲಿನ ವಾಯುಪಡೆ ಕೇಂದ್ರ ಸಮೀಪ ಹಾರಾಡುತ್ತಿದ್ದ ಮತ್ತೊಂದು ಡ್ರೋಣ್‍ ವೊಂದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.
ಇದಕ್ಕೂ ಮುನ್ನ ಈ ತಿಂಗಳ 15ರಂದು ಜಮ್ಮು ವಾಯು ನೆಲ ಕೇಂದ್ರ ಸಮೀಪದ ಪಲ್ಲನ್‍ ವಾಲಾ ಪ್ರದೇಶದ ಗಡಿನಿಯಂತ್ರಣಾ ರೇಖೆಯ ಪಲ್ಲನ್‍ ವಾಲಾ ದಲ್ಲಿ ಡ್ರೋಣ್‍ ಹಾರಾಡುತ್ತಿರುವುದು ಕಂಡು ಬಂದಿತ್ತು.
ಅಂತಾರಾಷ್ಟ್ರೀಯ ಗಡಿಯ ಅರ್ನಿಯಾ ಪ್ರದೇಶದಲ್ಲಿ ಪತ್ತೆಯಾದ ಡ್ರೋಣ್‍ ಅನ್ನು ಪಾಕಿಸ್ತಾನದ ಕಡೆ ಹಿಮ್ಮೆಟ್ಟಿದ 24 ತಾಸಿನಲ್ಲೇ ಈ ಘಟನೆ ನಡೆದಿತ್ತು.

ಬುಧವಾರ ಮುಂಜಾನೆ ಸುಮಾರು 4 ಗಂಟೆಗೆ ವಾಯಪಡೆ ಕೇಂದ್ರದ ಬಳಿ ಹಾರಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ ಏನೊಂದೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

, ,

Leave a Reply

Your email address will not be published. Required fields are marked *