ಯಡಿಯೂರಪ್ಪರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸುತ್ತಾರೆಯೋ ಅಥವಾ ಬದಲಾಯಿಸುತ್ತಾರೋ ಎನ್ನುವುದು ಗೊತ್ತಿಲ್ಲ:ಎಂಟಿಬಿ

ಯಡಿಯೂರಪ್ಪರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸುತ್ತಾರೆಯೋ ಅಥವಾ ಬದಲಾಯಿಸುತ್ತಾರೋ ಎನ್ನುವುದು ಗೊತ್ತಿಲ್ಲ:ಎಂಟಿಬಿ

ಬೆಂಗಳೂರು,ಜು.22 ಯಡಿಯೂರಪ್ಪರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸುತ್ತಾರೆಯೋ ಅಥವಾ ಬದಲಾಯಿಸುತ್ತಾರೋ ಎನ್ನುವುದು ತಮಗೆ ಗೊತ್ತಿಲ್ಲ ಎಂದು ಸಚಿವ ಎಂಟಿಬಿ ನಾಗಾರಾಜ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ.ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆದ ಬಳಿಕ ಗೊತ್ತಾಗುತ್ತದೆ.ನಾಯಕತ್ವ ಬದಲಾವಣೆ ಮಾಹಿತಿ ನನಗೆ ಇಲ್ಲ.ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ.ನಮ್ಮ ಸಂಪೂರ್ಣ ಒಪ್ಪಿಗೆ ಇದೆವೈಯುಕ್ತಿಕ ತೀರ್ಮಾನಕ್ಕೆ ಎಂಟಿಬಿ ಬದ್ಧ‌.ಯಡಿಯೂರಪ್ಪರನ್ನು ನಂಬಿ ನಾವು ಬಿಜೆಪಿಗೆ ಬಂದು ಸರ್ಕಾರ ರಚನೆಗೆ ಮಾಡಿದೆವು.

ಕೊರೋನಾ ಸೇರಿದಂತೆ ಎಲ್ಲ ವಿಚಾರಗಳನ್ನು ಅವಲೋಕನ ಮಾಡಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಎಂಟಿಬಿ ಉತ್ತರಿಸಿದರು.

,

Leave a Reply

Your email address will not be published. Required fields are marked *