ನಿರ್ಮಾಪಕಿ ಶೈಲಜಾ ನಾಗರಾಜ್ ದತ್ತು ಪಡೆದ ಸಿಂಹದ ಹೆಸರೇನು ಗೊತ್ತಾ?

ನಿರ್ಮಾಪಕಿ ಶೈಲಜಾ ನಾಗರಾಜ್ ದತ್ತು ಪಡೆದ ಸಿಂಹದ ಹೆಸರೇನು ಗೊತ್ತಾ?

ಬೆಂಗಳೂರು, ಜೂನ್ 07 ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ನಟ ದರ್ಶನ್ ಕರೆ ನೀಡಿದ ಬೆನ್ನಲ್ಲೆ ನಿರ್ಮಾಪಕಿ ಶೈಲಜಾ ನಾಗರಾಜ್‌ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಿಂಹವೊಂದನ್ನು ದತ್ತು ಪಡೆದಿದ್ದಾರೆ. ಹಾಗಾದರೆ ಈ ಸಿಂಹಕ್ಕೆ ಏನಂತ ಹೆಸರಿಟ್ಟಿದ್ದಾರೆ ಗೊತ್ತಾ?

ದರ್ಶನ್ ನಟಿಸಿದ್ದ ‘ಯಜಮಾನ’ ಸಿನಿಮಾ ನಿರ್ಮಾಣ ಮಾಡಿದ್ದ ಶೈಲಜಾ ನಾಗರಾಜ್, ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಸಿಂಹವೊಂದನ್ನು ದತ್ತು ಪಡೆದಿದ್ದಾರೆ. ದತ್ತು ಪಡೆದ ಸಿಂಹಕ್ಕೆ ದರ್ಶನ್ ಎಂದು ಹೆಸರಟ್ಟಿರುವುದು ವಿಶೇಷ.

ಕರೆ ಕೊಟ್ಟ ಕೂಡಲೇ ಸಿಂಹವನ್ನು ದತ್ತು ಪಡೆದ ನಿರರ್ಮಾಪಕಿ ಶೈಲಜಾ ನಾಗರಾಜ್ ಹಾಗೂ ವಿ.ಹರಿಕೃಷ್ಣ ಅವರುಗಳಿಗೆ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಶನಿವಾರ ವಿಡಿಯೋ ಮಾಡಿದ್ದ ನಟ ದರ್ಶನ್, ‘ರಾಜ್ಯದಲ್ಲಿ 9 ಮೃಗಾಲಯಗಳಿವೆ. ಅಲ್ಲಿಗೆ ಬರುವ ಪ್ರವಾಸಿಗರಿಂದ ಪ್ರಾಣಿಗಳ ಆರೈಕೆ ನಡೆಯುತ್ತಿತ್ತು. ಲಾಕ್‌ಡೌನ್ ಇರುವ ಕಾರಣ ಪ್ರವಾಸಿಗರು ಬರದೆ ಪ್ರಾಣಿಗಳ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಮೃಗಾಲಯದಲ್ಲಿರುವ ಪ್ರಾಣಿಗಳು, ಪಕ್ಷಿಗಳನ್ನು ದತ್ತು ಪಡೆದು ಅವರುಗಳು ಆರೈಕೆಗೆ ದೇಣಿಗೆ ನೀಡಿರಿ’ ಎಂದು ದರ್ಶನ್ ಮನವಿ ಮಾಡಿದ್ದರು.

ದರ್ಶನ್ ಮನವಿ ಮಾಡಿದ ಬೆನ್ನಲ್ಲೇ ಹಲವಾರು ಮಂದಿ ಪ್ರಾಣಿಗಳು,ಪಕ್ಷಗಳನ್ನು ನಾ ಮುಂದು-ತಾ ಮುಂದು ಎಂದು ದತ್ತು ಪಡೆಯುತ್ತಿದ್ದಾರೆ. ಮೃಗಾಲಯಗಳು ಕೊಟ್ಟ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಮಾತಿಗೆ ಗೌರವ ನೀಡಿ ಪ್ರಾಣಿ-ಪಕ್ಷಿ ದತ್ತು ಪಡೆದವರಿಗೆ ಡಿ ಬಾಸ್ ಧನ್ಯವಾದಗಳನ್ನು ಹೇಳಿದ್ದಾರೆ.

,

Leave a Reply

Your email address will not be published. Required fields are marked *