ಕೋವಿಡ್ ನಿಂದ ಕುಗ್ಗದಿರಿ, ಸಕಾರಾತ್ಮಕ ಚಿಂತನೆಯಿರಿಲಿ: ನಟಿ ರಾಧಿಕಾ ಪಂಡಿತ್

ಕೋವಿಡ್ ನಿಂದ ಕುಗ್ಗದಿರಿ, ಸಕಾರಾತ್ಮಕ ಚಿಂತನೆಯಿರಿಲಿ: ನಟಿ ರಾಧಿಕಾ ಪಂಡಿತ್

ಬೆಂಗಳೂರು, ಜೂನ್ 07 ಕೊರೋನಾ, ಲಾಕ್ ಡೌನ್ ನಿಂದಾಗಿ ಮಾನಸಿಕವಾಗಿ ಕುಗ್ಗಿರುವ ಅಭಿಮಾನಿಗಳಿಗೆ ಪಾಸಿಟಿವ್ ಸಂದೇಶಗಳೊಂದಿಗೆ ಖುಷಿಕೊಡುವುದಾಗಿ ನಟಿ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದ ರಾಧಿಕಾ ಮತ್ತೆ ಆಕ್ಟಿವ್ ಆಗಿ ಅಭಿಮಾನಿಗಳಿಗೆ ಖುಷಿಕೊಡುವಂತಹ ಪಾಸಿಟಿವ್ ಸಂದೇಶಗಳು, ಫೋಟೋಗಳನ್ನು ಪ್ರಕಟಿಸಿ ನಿಮ್ಮ ಮುಖದಲ್ಲಿ ನಗು ತರಿಸಲು ಯತ್ನಿಸುವುದಾಗಿ ಹೇಳಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳು ಎಲ್ಲರಿಗೂ ತ್ರಾಸದಾಯಕವಾಗಿತ್ತು. ಹಲವರು ನೋವು ಅನುಭವಿಸಿದರು, ತಮ್ಮ ಆಪ್ತರನ್ನು ಕಳೆದುಕೊಂಡರು. ಮಾನಸಿಕವಾಗಿ ನಾವೆಲ್ಲರೂ ಕುಗ್ಗಿ ಹೋಗಿದ್ದೆವು. ಆದರೆ ಯಾರೂ ಧೃತಿಗೆಡಬೇಡಿ, ಒಳ್ಳೆಯ ಕಾಲ ಬರುತ್ತದೆ ಎಂಬ ಸಕಾರಾತ್ಮಕ ಭರವಸೆಯಲ್ಲಿ ಬದುಕೋಣ ಎಂದು ರಾಧಿಕಾ ಹೇಳಿದ್ದಾರೆ.

, ,

Leave a Reply

Your email address will not be published. Required fields are marked *