ಅಹಮದ್ ಪಟೇಲ್‌ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ – ಚಾರ್ಜ್‌ಶೀಟ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರು: ಮೇ 26 (ಉದಯಕಾಲ ನ್ಯೂಸ್) ಅಹಮದ್ ಪಟೇಲ್‌ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಜಾರಿ ನಿರ್ದೇಶನಾಲಯ ಹೊಸದಾಗಿ ಸಲ್ಲಿಸಿರುವ ಚಾರ್ಜ್‌ಶೀಟ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸದಾಶಿವನಗರದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಫೈಲ್ ಮಾಡಿರೋದು ಮಾಧ್ಯಮದಲ್ಲಿ ಗೊತ್ತಾಯ್ತು. ನಮಗೆ ಇನ್ನೂ ಕಾಪಿ ಸಿಕ್ಕಿಲ್ಲ. ಸಾಮನ್ಯವಾಗಿ ೬ ತಿಂಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡ್ತಾರೆ. ಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಸೃಷ್ಠಿ ಮಾಡಲು ಸಾಧ್ಯವಿಲ್ಲ. ಕಾಪಿ ಬರಲಿ ಕಾನೂನಿದೆ.. ದೇಶದಲ್ಲಿ ಸತ್ಯ ಧರ್ಮ ಇದೆ. ನಾನೇನು ತಪ್ಪು ಮಾಡಿಲ್ಲ ಅನ್ನೋದು ರಾಜ್ಯಕ್ಕೆ ದೇಶಕ್ಕೆ ಗೊತ್ತಿದೆ. ಅವರ ಪಾರ್ಟಿನೇ ಬಿಡೋಲ್ಲ.. ನಮ್ಮನ್ನ ಬಿಡ್ತಾರೆ. ಅಹಮದ್ ಪಟೇಲ್ ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ ಎಂದು ತಿಳಿಸಿದರು.

ಪೋಲಿಟಿಕಲಿ ಎಲ್ಲಾ ಅಸ್ತ್ರ ಉಪಯೋಗಿಸ್ತಾ ಇದಾರೆ. ಅವರು ನಮಗೆ ಫರ್ದರ್ ನೋಟಿಸ್ ಕೊಡ್ತಾರೆ. ಆಗ ಖಂಡಿತ ಪರೀಶಿಲಿಸ್ತಿವಿ. ನಾವು ಕಾನೂನು ಪರಿಪಾಲನೆ ಮಾಡುವವರು ಮಾಡ್ತಿವಿ. ರಾಜಕೀಯವಾಗಿ ಬಿಜೆಪಿಗೆ ಎದುರಿಸುವವರಿಗೆಲ್ಲ ಹೀಗೆ ಮಾಡ್ತಾ ಇದೆ. ಒಂದು ಅವರಿಗೆ ಶರಣಾಗಬೇಕು. ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು. ಐ ವಿಶ್ ದೆಮ್ ಆಲ್ ದಿ ಬೆಸ್ಟ್ ಎಂದು ಡಿಕೆಶಿ ಹೇಳಿದರು.

Leave a Reply

Your email address will not be published. Required fields are marked *