ದಿಲೀಪ್‌ ಕುಮಾರ್‌ ಆರೋಗ್ಯ ಸ್ಥಿರವಾಗಿದೆ; ಸಾಯಿರಾ ಭಾನು

ದಿಲೀಪ್‌ ಕುಮಾರ್‌ ಆರೋಗ್ಯ ಸ್ಥಿರವಾಗಿದೆ; ಸಾಯಿರಾ ಭಾನು

ಮುಂಬೈ, ಜೂನ್‌ 7  ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಪತ್ನಿ ಸಾಯಿರಾ ಭಾನು ಹೇಳಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್‌ ಕುಮಾರ್‌ ಅವರನ್ನು ಕುಟುಂಬ ಸದಸ್ಯರು ಭಾನುವಾರ ಬೆಳಿಗ್ಗೆ ಮುಂಬೈನ ಪ್ರಮುಖ ಆಸ್ಪತ್ರೆಗೆ ದಾಖಲಿಸಿದ್ದರು.
ಈ ನಡುವೆ ದಿಲೀಪ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ದಿಲೀಪ್ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸಂದೇಶಗಳಿಗೆ ಸಾಯಿರಾ ಭಾನು ಪ್ರತಿಕ್ರಿಯಿಸಿದ್ದಾರೆ. ‘ಸಾಬ್ ಆರೋಗ್ಯದ ಬಗ್ಗೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಯಾರೂ ನಂಬಬಾರದು. ಅವರ ಆರೋಗ್ಯ ಈಗ ಸ್ಥಿರವಾಗಿದೆ. ನೀವು ತೋರಿಸಿದ ಪ್ರೀತಿ , ಅವರ ಆರೋಗ್ಯಕ್ಕಾಗಿ ಮಾಡಿದ ಪ್ರಾರ್ಥನೆಗಳಿಗೆ ಧನ್ಯವಾದಗಳು. ಇನ್ನೊಂದು ವಿಷಯವೆಂದರೆ, ಅವರನ್ನು ಎರಡು ಅಥವಾ ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ”ಎಂದು ಸಾಯಿರಾ ಭಾನು ಟ್ವೀಟ್ ಮಾಡಿದ್ದಾರೆ.

,

Leave a Reply

Your email address will not be published. Required fields are marked *