ಮಲ್ಲಿಕಾರ್ಜುನ ಖರ್ಗೆ ಜನ್ಮದಿನಕ್ಕೆ ಶುಭಾಶಯ ಕೋರಿದ ದೇವೇಗೌಡರು

ಬೆಂಗಳೂರು: ಕಾಂಗ್ರೆಸ್​​ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನಕ್ಕೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರು ಶುಭಾಶಯ ಕೋರಿದ್ದಾರೆ.

ಆತ್ಮೀಯ ಮಲ್ಲಿಕಾರ್ಜುನ್ ಖರ್ಗೆ ಅವರೇ, ನಿಮ್ಮ ತಾಳ್ಮೆ, ಬುದ್ಧಿವಂತಿಕೆ, ಗಮನಾರ್ಹ ದೃಷ್ಟಿ ಮತ್ತು ಅನುಕರಣೀಯ ನಾಯಕತ್ವ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ನಾನು ನಿಮಗೆ ಶಾಂತಿ, ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೀವು ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ ಸಲ್ಲಿಸಿರುವ ಸೇವೆಗೆ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳು ಮತ್ತು ಈ ದಿನ ವಿಶೇಷವಾದ ದಿನ. ನಿಮ್ಮ ಜನುಮ ದಿನ, ನಿಮಗೆ ಜನುಮ ದಿನದ ಶುಭಾಶಯಗಳನ್ನು ಎಂದಿದ್ದಾರೆ.

Leave a Reply

Your email address will not be published. Required fields are marked *