ಅಮೆರಿಕದಲ್ಲಿ 2 ಕೋಟಿ ದಾಟಿದ ಕೊರೋನ ಪೀಡಿತರ ಸಂಖ್ಯೆ

ಅಮೆರಿಕದಲ್ಲಿ 2 ಕೋಟಿ ದಾಟಿದ ಕೊರೋನ ಪೀಡಿತರ ಸಂಖ್ಯೆ
ವಾಷಿಂಗ್ಟನ್, ಜನವರಿ 6 ಅಮೆರಿಕದಲ್ಲಿ ಕೊರೋನ ಪೀಡಿತರ ಸಂಖ್ಯೆ ಈಗ
ಎರಡು ಕೋಟಿ ದಾಟಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದಲ್ಲಿ
ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ 21 ದಶಲಕ್ಷ (ಎರಡು ಕೋಟಿ) ಮೀರಿದೆ
ಎಂದು ಹೇಳಿದೆ.
ಈವರೆಗೆ 21,042,929 ಸೋಂಕು ಪ್ರಕರಣ ದಾಖಲಾಗಿದ್ದು ಮಾರಕ ಸೋಂಕಿಗೆ
ಇದುವರೆಗೆ 357,132 ಸಾವುಗಳು ದಾಖಲಾಗಿವೆ ಎಂದು ವಿಶ್ವವಿದ್ಯಾಲಯದ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಚ್ 11, 2020 ರಂದು ಕೊರೋನ
ಸೋಂಕು ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು .
ಕಳದೆ ಒಂದು ವರ್ಷದ ಅವಧಿಯಲ್ಲಿ ಜಗತ್ತಿನ ಪ್ರಮುಖ ದೇಶಗಳು ಮಹಾಮಾರಿಯ
ವಿರುದ್ಧ ಹೋರಾಡಲು, ಕೊರೋನ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮ ಹಾಕಿ
ಲಸಿಕೆ ತಯಾರಿಕೆ ಮಾಡಿ ಜನರಿಗೆ ನೀಡಲು ಹೊರಟಿವೆ

Leave a Reply

Your email address will not be published. Required fields are marked *