ಬೆಂಗಳೂರು : ಜನೆವರಿ 23 (ಉದಯಕಾಲ) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಭಾರತದ ಸ್ವತಂತ್ರ್ಯಕ್ಕೆ ಬಹಳ ದೊಡ್ಡ ಬುನಾದಿ ಹಾಕಿಕೊಟ್ಟ ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 125 ನೇ ಜನ್ಮ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧ ಆವರಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಅವರ 125ನೇ ಜನ್ಮ ದಿನಾಚರಣೆಯನ್ನ ವಿಚಾರಧಾರೆಯ ಮೂಲಕ, ಚರ್ಚೆಗಳ ಮೂಲಕ, ವಿಮರ್ಶೆಗಳ ಮೂಲಕ ಸ್ಮರಣೆ ಮಾಡುವ ಮೂಲಕ ಆಚರಣೆ ಮಾಡಲಿದ್ದೇವೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳು ಪ್ರತಿಜ್ಞಾವಿಧಿ ಬೋಧಿಸಿದರು. ಬ್ರಿಟೀಷರ ವಿರುದ್ದ ಸೈನ್ಯವನ್ನ ಕಟ್ಟಿ ಹೋರಾಟ ಮಾಡಿದ ಅಪ್ರತಿಮ ವೀರ ಸುಭಾಷ್ ಚಂದ್ರಭೋಸ್. ಯುವಕರಿಗೆ ಪ್ರೇರಣೆಕೊಟ್ಟದ್ದು. ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ್ಯಕೊಡಿಸುತ್ತೇನೆ ಎಂದು ಯುವಕರನ್ನ ಉತ್ಸಾಹಿಸಿ ಸೈನ್ಯಕಟ್ಟಿ ಹೋರಾಡಿದ ಸೇನಾನಿ ಎಂದು ಅವರ ಸಾಧನೆಯನ್ನ ಸ್ಮರಿಸಿದರು.