ದೊಡ್ಡದುನ್ನಸಂದ್ರ ಕಲ್ಲಿನ ಕ್ವಾರಿಯಲ್ಲಿ ಬಾಲಕರ ಸಾವು, ಸಚಿವ ಎಂಟಿಬಿ ನಾಗರಾಜು ಆರ್ಥಿಕ ನೆರವು

ಹೊಸಕೋಟೆ: ಮಾರ್ಚ್ 06 (ಉದಯಕಾಲ) ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೊಡ್ಡ ದುನ್ನಸಂದ್ರ ಗ್ರಾಮದ ಕಲ್ಲಿನ ಕ್ವಾರಿಯಲ್ಲಿದ್ದ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ನಡೆದಿದೆ. ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಮೃತ ಬಾಲಕರ ಕುಟುಂಬಗಳಿಗೆ ಸಾಂತ್ವನ ಹೇಳಿ ಆರ್ಥಿಕ ನೆರವನ್ನು ನೀಡಿದ್ದಾರೆ.

ದೊಡ್ಡ ದುನ್ನಸಂದ್ರ ಗ್ರಾಮದ ಏಳನೇ ತರಗತಿ ವಿದ್ಯಾರ್ಥಿಗಳಾದ ನಿವಾಸ್(14) ಹಾಗೂ ಇರ್ಷದ್(14) ನಿನ್ನೆ ಕಲ್ಲಿನ ಕ್ವಾರಿಯಲ್ಲಿದ್ದ  80 ಅಡಿ ಆಳದ ನೀರಿನಲ್ಲಿ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಮೃತ ದೇಹಗಳನ್ನು ನೀರಿನಿಂದ ಹೊರ ತಗೆದಿದ್ದಾರೆ.

ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆ ಘಟನೆಯ ಸ್ಥಳಕ್ಕೆ ತೆರಳಿದ ಸಚಿವ ಎಂಟಿಬಿ ನಾಗರಾಜು, ಕಲ್ಲಿನ ಕ್ವಾರಿಯ ಗುಂಡಿಯನ್ನು ಕೂಡಲೇ ಮುಚ್ಚಲು ಆದೇಶಿದರು. ಮೃತ ಬಾಲಕರ ಕುಟುಂಬಗಳಿಗೆ ಸ್ಥಳದಲ್ಲೇ ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಪರಿಹಾರ ನೀಡಿದರು. ಅಲ್ಲದೆ,ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *