ಕೊನೆಯ 5 ವರ್ಷಗಳ ಪರೀಕ್ಷೆ ಈಗ ಬಂದಿದೆ!

ಫೇಸ್ಬುಕ್ ಲೇಖನ

ಪ್ರೀತಿಯ ಮತದಾರರೇ,

 1. ಸ್ಮಾರ್ಟ್ ಸಿಟಿ ಆಗಿ ಬದಲಾದ 4 ನಗರಗಳನ್ನು ಹೆಸರಿಸಿ?
 2. ಸಂಸದರು ದತ್ತು ಪಡೆದ ಹಳ್ಳಿಗಳು, ಪ್ರಧಾನಿಗಳು ಆಶ್ವಾಸನೆ ನೀಡಿದ ಹಾಗೆ ಮಾದರಿ ಗ್ರಾಮಗಳಾದ 4 ಗ್ರಾಮಗಳನ್ನು ಹೆಸರಿಸಿ.
 3. ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ಇರುವ 4 ಜಿಲ್ಲೆಗಳನ್ನು ಹೆಸರಿಸಿ.
 4. ಹೊಸದಾಗಿ ಆಸ್ಪತ್ರೆ ಆರಂಭಗೊಂಡ 4 ಜಿಲ್ಲೆಗಳನ್ನು ಹೆಸರಿಸಿ.
 5. ವೇಗವಾಗಿ ಘೆಅ ಹೆಚ್ಚದೆ ಇರುವ 4 ಕ್ಷೇತ್ರಗಳನ್ನು ಹೆಸರಿಸಿ
 6. ಮೋದಿಜಿ ರಾಜತಾಂತ್ರಿಕ ಸಂಬಂಧವನ್ನು ಬಲಗೊಳಿಸಿದ ಅಕ್ಕಪಕ್ಕದ 4 ದೇಶಗಳನ್ನು ಹೆಸರಿಸಿ.
 7. ಮೋದಿಯ ಜನರಿಂದ /ಪೊಲೀಸರಿಂದ ವಿದ್ಯಾರ್ಥಿಗಳ ವಿರುದ್ಧ ಹಿಂಸಾಚಾರ ನಡೆಯದ 4 ವಿಶ್ವವಿದ್ಯಾಲಯಗಳನ್ನು ಹೆಸರಿಸಿ.
 8. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಪದಗಳಿಂದ ಬೈಯದೆ, ಸುಳ್ಳು ಸುದ್ದಿ ಹರಡದೆ ಇರುವ, ಪ್ರಧಾನಿ ಮೋದಿ ಖುದ್ದಾಗಿ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿರುವ ಒಂದು ಭಕ್ತನನ್ನು ಹೆಸರಿಸಿ.
 9. ಹೊಸದಾಗಿ ವಿದ್ಯುತ್ ಶಕ್ತಿ ಉತ್ಪದನಾ ಕಾರ್ಖಾನೆ ಆರಂಭಗೊಂಡ 4 ರಾಜ್ಯಗಳನ್ನು ಹೆಸರಿಸಿ
 10. ತನ್ನ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓಡಿಸುತ್ತಿರುವ 4 ಮಂತ್ರಿಗಳನ್ನು ಹೆಸರಿಸಿ.
 11. ಹಿಂದಿನಗಿಂತ ಈಗ ಅತೀ ಸ್ವಚ್ಛವಾದ 4 ನಗರಗಳನ್ನು ಹೆಸರಿಸಿ.
 12. ಹಿಂದೆ ರೈತರ ಆತ್ಮಹತ್ಯೆ ಹೆಚ್ಚಿದ್ದು ಈಗ ಸಂಪೂರ್ಣವಾಗಿ ನಿಂತ 4 ರಾಜ್ಯಗಳನ್ನು ಹೆಸರಿಸಿ
 13. ಶುದ್ಧಗೊಂಡ ಗಂಗೆಯ 4 ಕಿ.ಮೀ. ಉದ್ದದ ಭಾಗವನ್ನು ತೋರಿಸಬಲ್ಲಿರಾ?
 14. ಕಪ್ಪು ಹಣ ವಶಪಡಿಸಿಕೊಂಡು ಶಿಕ್ಷಿಸಲ್ಪಟ್ಟ 4 ವ್ಯಕ್ತಿಗಳನ್ನು ಹೆಸರಿಸಿ.
 15. ಹಗರಣದಲ್ಲಿ ಭಾಗಿ ಆಗಿದ್ದು ಜೈಲುಪಾಲಾದ 4 ವ್ಯಕ್ತಿಗಳನ್ನು ಹೆಸರಿಸಿ.
 16. ಪ್ರತಿ ಹಳ್ಳಿಗೂ ವಿದ್ಯುತ್ ಶಕ್ತಿ ತಲುಪಿದ 4 ರಾಜ್ಯಗಳನ್ನು ಹೆಸರಿಸಿ
 17. ಮಹಿಳೆಯರು ಸುರಕ್ಷಿತರೆನಿಸಿಕೊಳ್ಳುವ 4 ನಗರಗಳನ್ನು ಹೆಸರಿಸಿ
 18. ಬೆಲೆ ಏರಿಸದೆ ಇರುವ ದಿನ ನಿತ್ಯದ 4 ಆಹಾರಗಳನ್ನು ಹೆಸರಿಸಿ
 19. ಗಡಿಯಲ್ಲಿ ಭಯೋತ್ಪಾದಕರ ಚಟುವಟಿಕೆಯಿರದೆ ಇದ್ದ 4 ವರಗಳನ್ನು ತಿಳಿಸಿ.
 20. ಬಲಾತ್ಕಾರ ಪ್ರಕರಣ ನಡೆಯದೆ ಇದ್ದ 4 ತಿಂಗಳುಗಳನ್ನು ತಿಳಿಸಿ.
 21. ಜನರಿಗೆ ತಮ್ಮ ಶ್ರದ್ಧಾ-ನಂಬಿಕೆಗಳಿಗೆ ತೊಂದರೆಯಾಗದೆ ಜೀವನ ನಡೆಸಿದ 4 ರಾಜ್ಯಗಳನ್ನು ಹೆಸರಿಸಿ.
 22. ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ಪಡೆದ ನಾಲ್ಕು ಮಹಿಳೆಯರನ್ನು ಹೆಸರಿಸಿ
 23. ಹೊಸ ವಿಮಾನ ನಿಲ್ದಾಣ ಪಡೆದ 4 ರಾಜ್ಯಗಳನ್ನು ಹೆಸರಿಸಿ
 24. ದೇಶದ ಹಣ ಹಿಡಿದು ಓಡಿಹೋಗಿ ಆಮೇಲೆ ವಾಪಸು ಬಂಡ 4 ಜನ ಬ್ಯಾಂಕ್ ಸಾಲಗಾರರನ್ನು ಹೆಸರಿಸಿ
 25. ದೇಶದ ಸಂಪತ್ತು ಲೂಟಿ ಮಾಡಿ ಓದಿ ಹೋದ ಮತ್ತು ಸರಕಾರದೊಂದಿಗೆ ಸಂಬಂಧವೇ ಇರದ 4 ಜನ ಉದ್ಯಮಿಗಳನ್ನು ಹೆಸರಿಸಿ.
 26. ನೋಟುಬಂಧಿ ಸಮಯದಲ್ಲಿ ಬ್ಯಾಂಕಿನ ಮುಂದೆ ಸರತಿಯಲ್ಲಿ ನಿಂತ 4 ಜನ ಬಿಜೆಪಿ ರಾಜಕಾರಣಿಗಳನ್ನು ಹೆಸರಿಸಿ.
 27. ಪೂರ್ತಿ ತಿಂಗಳು ಯಾವಾಗಲು ಸಹ ನಗದು ಸಿಗುವ 4 ಅ ಗಳನ್ನೂ ಹೆಸರಿಸಿ
 28. ತನ್ನ ಸ್ವಾಯುತ್ತತೆ ಜೊತೆ ರಾಜಿ ಮಾಡಿಕೊಳ್ಳದ 4 ಸಂಸ್ಥೆಗಳನ್ನು ತಿಳಿಸಿ.
 29. ಬಿಜೆಪಿ ಮಂತ್ರಿಗಳು/ ಸಂಸದರ ಮೇಲೆ ಕ್ರಮ ಕೈಗೊಂಡ ಯಾವುದಾದರೂ 4 ಭ್ರಷ್ಟಾಚಾರ ದೂರು ಪ್ರಕರಣ ತಿಳಿಸಿ.
 30. ಮೇಕ್ ಇನ್ ಇಂಡಿಯಾ ಯೋಜನೆಯನ್ನು ಹುರುದುಂಬಿಸಲು ತೆರಿಗೆ ಹೆಚ್ಚಿಸಿದ ಯಾವುದಾದರೂ 4 ಆಮದು ಮಾಡಿಕೊಳ್ಳುವ ಸರಕುಗಳನ್ನು ಹೆಸರಿಸಿ
 31. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಆಗದಿರುವ ಸರದಿಯ 4 ದಿನ ತಿಳಿಸಿ.
 32. ಹಿಂದೂ-ಮುಸ್ಲಿಂ ಎಂದು ಬೊಬ್ಬೆ ಹಾಕದಿರುವ 4 ಜನ ಬಿಜೆಪಿ ವಕ್ತಾರರನ್ನು ಹೆಸರಿಸಿ
 33. ಗುರುತಿಸಬಲ್ಲ ಅಮೋಘ ಕಾರ್ಯಗಳನ್ನು ಮಾಡಿದ 4 ಸಚಿವಾಲಯಗಳನ್ನು ಹೆಸರಿಸಿ
 34. ತನ್ನ ಸಚಿವಾಲಯದ ಕೆಲಸದ ಮಹತ್ವದ ನಿರ್ಧಾರಗಳನ್ನು ತಾನೇ ತೆಗೆದುಕೊಂಡ 4 ಕೇಂದ್ರ ಸಚಿವರನ್ನು ಹೆಸರಿಸಿ
 35. ಉತ್ಪದಾನೆ ಅಧಿಕಗೊಂಡ 4 ಉತ್ಪದನಾ ವಲಯಗಲನ್ನು ತಿಳಿಸಿ
 36. ವಿಧಾನಸಭಾ ಚುನಾವಣೆಗಳಲ್ಲಿ ಕೇಂದ್ರ ಸಚಿವರು ಚುನಾವಣಾ ಪ್ರಚಾರಕ್ಕೆ ಬರದೇ ಇದ್ದ 4 ರಾಜ್ಯಗಳನ್ನು ಹೆಸರಿಸಿ
 37. ಮೋದಿ ಭಾಷಣದಲ್ಲಿ ವಿರೋಧ ಪಕ್ಷವನ್ನು ಹೀಯಾಳಿಸದೆ ಇದ್ದ 4 ಸರಕಾರಿ ಕಾರ್ಯಕ್ರಮಗಳನ್ನು ತಿಳಿಸಿ
 38. ಮೋದಿ ದಿನಕ್ಕೆ 4 ಬಾರಿಗಿಂತ ಕಡಿಮೆ ಬಟ್ಟೆ ಬದಲಿಸಿದ 4 ದಿನಗಳನ್ನು ತಿಳಿಸಿ.
 39. ಮೋದಿಜಿಯವರು 10 ಬಾರಿಗಿಂತ ಕಡಿಮೆ ಸುಳ್ಳು ಹೇಳಿದ 4 ಭಾಷಣಗಳನ್ನು ನೆನಪಿಸಿಕೊಳ್ಳಬಲ್ಲಿರಾ?
 40. ದೇಶಕ್ಕೆ 1 ಕೋಟಿಗಿಂತ ಕಡೀ ಹೊರೆ ಬಿದ್ದ ಮೋದಿಜಿಯ 4 ವಿದೇಶ ಪ್ರವಾಸಗಳನ್ನು ಹೆಸರಿಸಿ
 41. 1 ಕೋಟಿ ಹಣ ಖರ್ಚುಮಾಡದೆ ಇದ್ದ ಪ್ರಧಾನಿ ಮೋದಿಯವರ 4 ್ಕ್ಝ್ಝ ಗಳನ್ನೂ ಹೆಸರಿಸಿ
 42. ಪೆಟ್ರೋಲ್-ಡೀಸೆಲ್ ತೆರಿಗೆಯಿಂದ ಬರುವ ಆದಾಯ 2,30000 ಕೋಟಿಗಳು. ಇದು ಎಲ್ಲಿಗೆ ಹೋಗುತ್ತಿವೆ?
 43. ದೆಹಲಿಯಲ್ಲಿರುವ 7 ರ್ಸ್ಟಾ ಬಿಜೆಪಿ ಆಫೀಸ್ ಕಟ್ಟಲು ಹಣ ಎಲ್ಲಿಂದ ಬಂತು?
 44. 6 ತಿಂಗಳು ವ್ಯವಹಾರ ನಡೆಯದ ಇದ್ದ ಕಾಲದಲ್ಲಿ ಅಮಿತ್ ಷಾ ಪುತ್ರ ಕೇವಲ 50 ಸಾವಿರ ಬಂಡವಾಳದಲ್ಲಿ 80 ಕೋಟಿ ಗಳಿಸಿದ್ದು ಹೇಗೆ? ಪ್ರಧಾನಿಗಳು ಈ ಬಗ್ಗೆ ಬಾಯಿಬಿಡುತ್ತಿಲ್ಲ ಯಾಕೆ?
 45. ಬಾಬಾ ರಾಮದೇವ್ ಅವರ ಸಂಪತ್ತು 13 ಸಾವಿರ ಕೋಟಿಯಿಂದ 1 ಲಕ್ಷದ 23 ಸಾವಿರ ಕೋಟಿಯಾದದ್ದು ಹೇಗೆ?
 46. ಆರ್ಥಿಕ ಕುಸಿತದ ಸ್ಥಿತಿಯಲ್ಲಿ ಮುಕೇಶ್ ಅಂಬಾನಿ ಶೇಕಡಾ 560 ರಷ್ಟು ಲಾಭ ಗಳಿಸಿದ್ದು ಹೇಗೆ?
 47. ಮೋದಿಯವರ ಮೇಲೆ ನಂಬಿಕೆ ಇಟ್ಟ ಯುವಜನತೆಯ ನಿರುದ್ಯೋಗ ಸಮಸ್ಯೆ ಬಗ್ಗೆ ಪಕೋಡ ಮಾರಾಟದ ಉದಾಹರಣೆ ಪ್ರಧಾನಿಗಳ ಬಾಯಲ್ಲಿ ಸಮಂಜಸವೇ?
  ನಾನು ದೇಶದ ಸಾಮಾನ್ಯ ನಾಗರಿಕನಾಗಿ, ಸರ್ಕಾರದ ಹಾನಿಕರ ನೀತಿಗಳನ್ನು ನಾನು ವಿರೋಧಿಸುತ್ತೇನೆ. ಮತ ಕೇಳುವ ಮುಂಚೆ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿ.
 • ಹರೀಶ್ ಗೌಡ

Leave a Reply

Your email address will not be published. Required fields are marked *