‘ತೌಕ್ತೆ’ ಚಂಡಮಾರುತ: ಭಟ್ಕಳದ ಮೀನುಗಾರ ಸಾವು

'ತೌಕ್ತೆ' ಚಂಡಮಾರುತ: ಭಟ್ಕಳದ ಮೀನುಗಾರ ಸಾವು


ಕಾರವಾರ (ಉತ್ತರ ಕನ್ನಡ), ಮೇ 15  'ತೌಕ್ತೆ' ಚಂಡಮಾರುತ ಪ್ರಭಾವದಿಂದಾಗಿ ಅರಬ್ಬಿ 
ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಹೊರಹೊಮ್ಮುತ್ತಿದ್ದು, ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ.


ಭಟ್ಕಳದ ಜಾಲಿಕೋಡಿಯಲ್ಲಿ ನೀರು ಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು 
ಹೋಗಿದ್ದ ಮೀನುಗಾರನೊಬ್ಬ ಎರಡು ದೋಣಿಗಳ ಮಧ್ಯೆ ಸಿಲುಕಿ ಮೃತಪಟ್ಟಿದ್ದಾರೆ. 


ಮೃತರನ್ನು ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಎಂದು ಗುರುತಿಸಲಾಗಿದೆ.


ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆತಕ್ಕೆ ನೀರುಪಾಲಾಗುತ್ತಿತ್ತು. 
ಹೀಗಾಗಿ ಅದನ್ನು ತಡೆದು ದಡದಿಂದ ಮೇಲೆ ತರಲು ಮೀನುಗಾರ ನೀರಿಗೆ ಇಳಿದಿದ್ದರು. ಈ ವೇಳೆ ಅಪ್ಪಳಿಸಿದ ಅಲೆಗೆ ಮತ್ತೊಂದು 
ದೋಣಿಯು ಅವರನ್ನು ದಡದಿಂದ ಮೇಲೆ ತರಬೇಕಿದ್ದ ದೋಣಿಯ ಮಧ್ಯೆ ಸಿಲುಕಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ
ಅವರು ಕೊನೆಯುಸಿರೆಳೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.
,

Leave a Reply

Your email address will not be published. Required fields are marked *