ಸಿ.ಟಿ.ರವಿ, ಪ್ರಿಯಾಂಕ ಖರ್ಗೆ ಟೀಕೆ ಒಪ್ಪಲಾಗದು: ಕುಮಾರಸ್ವಾಮಿ

ಚನ್ನಪಟ್ಟಣ, ಆ 16  ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಶ್ರಮಿಸಿದ ನಾಯಕರ ಬಗ್ಗೆ ಅಗೌರವ, ಅವಹೇಳನ ಸಲ್ಲದು ಎಂದು ಮಾಜಿ ಮುಖ್ಯಮಂತ್ರಿ ಎಚ್ . ಡಿ . ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಬಿಜೆಪಿ ನಾಯಕ ಸಿ.ಟಿ.ರವಿ ಮತ್ತು ಕಾಂಗ್ರೆಸ್ ನ ಪ್ರಿಯಾಂಕ ಖರ್ಗೆ ಹೇಳಿಕೆ ಸರಿಯಲ್ಲ ಎಂದರು.
ವೈಯಕ್ತಿಕ ವಿಚಾರಗಳೇ ಬೇರೆ, ಆದರೆ ನೆಹರು , ಇಂದಿರಾ ಗಾಂಧಿ ಹಾಗೂ ವಾಜಪೇಯಿ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರು ದೇಶಕ್ಕೆ ಮಹತ್ತರ ಕೊಡುಗೆ ಕೊಟ್ಟಿದ್ದಾರೆ. ಪಾಕಿಸ್ತಾನದಿಂದ ಬಂದ ನಿರಾಶ್ರಿತರ ವಿಚಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ಜೊತೆಗೆ ಕೃಷಿ , ಕೈಗಾರಿಕಾ ವಲಯದಲ್ಲಿ ಅವರ ಕೊಡುಗೆಯನ್ನು ದೇಶ ಮರೆಯುವಂತಿಲ್ಲ ಎಂದೂ ಹೇಳಿದರು.

, , ,

Leave a Reply

Your email address will not be published. Required fields are marked *