ಮಹಾಯುದ್ದ ಟಿವಿ ಸೋಶಿಯಲ್ ಮೀಡಿಯಾ ಸಂಪಾದಕ ಶಿವಾನಂದ ಕಾಚ್ಯಾಗೋಳ ಅವರನ್ನು ದುಷ್ಕರ್ಮಿಗಳು ಹತ್ಯೆಮಾಡಿ ಪರಾರಿ.!

ಮಹಾಯುದ್ದ ಟಿವಿ ಸೋಶಿಯಲ್ ಮೀಡಿಯಾ ಸಂಪಾದಕ ಶಿವಾನಂದ ಕಾಚ್ಯಾಗೋಳ ಅವರನ್ನು ದುಷ್ಕರ್ಮಿಗಳು ಹತ್ಯೆಮಾಡಿ ಪರಾರಿ.!
ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ ಸಮೀಪದ ರಾಜಾಪುರ ಗ್ರಾಮದ ಚುನಿಮಟ್ಟಿಯಲ್ಲಿ ಮಹಾಯುದ್ದ ಟಿವಿ ಸಂಪಾದಕನ ಬರ್ಬರ ಹತ್ಯೆ. ಮಾಡಿ ಪರಾರಿ ಯಾಗಿದ್ದಾರೆ‌.  ಬೆಳಗಾವಿ ಜಿಲ್ಲೆಯಲ್ಲಿ ಇದೀಗ ಸದ್ದು ಮಾಡುತ್ತಿರುವ ಮಹಾಯುದ್ದ ಟಿವಿ ಸಂಪಾದಕನನ್ನ ದುಷ್ಕರ್ಮಿಗಳು ರಾತ್ರೋ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಇನ್ನು ಯಾವ ಕಾರಣ ತಿಳಿದು ಬಂದಿಲ್ಲ ಮನೆಯಿಂದ ಕೇವಲ 100 ಮೀಟರ್ ಅಂತರದಲ್ಲಿ ಶವ ಪತ್ತೆ ರಾತ್ರಿ ನೋಡಿದ ಜನ ದಂಗಾಗಿಹೋಗಿದ್ದರು. ಇನ್ನು ತನಿಖೆಯ ನಂತರ ಆರೋಪಿಗಳ ಹೆಸರು  ಬಯಲಿಗೆ ಬರುತ್ತದೆ. ಇನ್ನು ಚಿಗುರುವ ವಯಸ್ಸಿನಲ್ಲೆ ಬರ್ಬರವಾಗಿ ಹತ್ಯೆಯಾದ ಶಿವಾನಂದ ಕಾಚ್ಯಾಗೋಳ. ಇನ್ನು ಸ್ಥಳಕ್ಕೆ ದಾವಿಸಿದ ಘಟಪ್ರಭಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಒಯ್ದು ತನಿಖೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *