ಕೋವಿಶೀಲ್ಡ್‌ ಲಸಿಕೆ ದರ ಪ್ರಕಟಿಸಿದ ಸೀರಂ ಸಂಸ್ಥೆ

ಕೋವಿಶೀಲ್ಡ್‌ ಲಸಿಕೆ ದರ ಪ್ರಕಟಿಸಿದ ಸೀರಂ ಸಂಸ್ಥೆ

ಮುಂಬೈ, ಏ 21 ಕೋವಿಶೀಲ್ಡ್‌ ಲಸಿಕೆ ದರವನ್ನು ಪುಣೆಯ ಸೀರಮ್ ಸಂಸ್ಥೆ ಬುಧವಾರ ಪ್ರಕಟಿಸಿದೆ. ಒಂದು ಡೋಸ್ ಕೋವಿ ಶೀಲ್ಡ್ ಲಸಿಕೆ ಬೆಲೆ ಸರ್ಕಾರಿ ಆಸ್ಪತ್ರೆಗಳಿಗೆ 400 ರೂ. ಖಾಸಗಿ ಆಸ್ಪತ್ರೆಗಳಿಗೆ 600 ರೂ ಎಂದು ತಿಳಿಸಿದೆ. ಮುಂದಿನ ಎರಡು ತಿಂಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸುವುದಾಗಿ ಅದು ಹೇಳಿದೆ.

.
ಉತ್ಪಾದನಾ ಸಾಮರ್ಥ್ಯದ ಶೇ. 50 ರಷ್ಟು ಕೇಂದ್ರ ಸರ್ಕಾರಕ್ಕೆ ಪೂರೈಸಲಾಗುವುದು ಉಳಿದ ಶೇ. 50 ರಷ್ಟು ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವುದು. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳು ನೇರವಾಗಿ ಲಸಿಕೆ ಸಂಗ್ರಹಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಅನುವು ಮಾಡಿಕೊಡಲಿವೆ ಎಂದು ತಿಳಿಸಿದೆ.

ಚಿಲ್ಲರೆ ದರಗಳಲ್ಲಿ ವಿಶೇಷವಾಗಿ ಕಾರ್ಪೊರೇಟ್ ಸಂಸ್ಥೆಗಳಿಗೆ, ಲಸಿಕೆ ನೀಡುವುದು ಸವಾಲಿನ ಸಂಗತಿಯಾಗಿದೆ ಎಂದು ವಿವರಿಸಿದೆ. ಚಿಲ್ಲರೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ನಾಲ್ಕರಿಂದ ಆರು ತಿಂಗಳಲ್ಲಿ ಲಸಿಕೆ ಲಭ್ಯವಾಗಲಿದೆ. ರಾಜ್ಯ ಸರ್ಕಾರದ ಸಂಸ್ಥೆಗಳು, ಖಾಸಗಿ ಆರೋಗ್ಯ ವ್ಯವಸ್ಥೆಗಳ ಮೂಲಕ ಲಸಿಕೆಗಳನ್ನು ಪಡೆಯಲು ಕಾರ್ಪೊರೇಟ್ ಮತ್ತು ಖಾಸಗಿ ಸಂಸ್ಥೆಗಳನ್ನು ಕೋರಲಾಗುವುದು.
ಇತರ ದೇಶಗಳ ಲಸಿಕೆಗಳ ದರಗಳನ್ನು ಕೋವಿ ಶೀಲ್ಡ್‌ ಹೋಲಿಸಿದರೆ, ಅಮೆರಿಕಾ ಲಸಿಕೆಯ ಪ್ರತಿ ಡೋಸ್‌ ಗೆ 1,500 ರೂ. ರಷ್ಯಾ, ಚೈನಾ ಲಸಿಕೆಯ ಒಂದು ಡೋಸ್‌ ಬೆಲೆ 750 ರೂ.ಗಿಂತ ಹೆಚ್ಚಾಗಿದೆ ಎಂದು ವಿವರಿಸಿದೆ.

, ,

Leave a Reply

Your email address will not be published. Required fields are marked *