ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 52,050 ಕೋವಿಡ್​ 19 ಸೋಂಕು ಪತ್ತೆ, 771 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 52,050 ಹೊಸ ಕೇಸ್​ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 18,55,746ಕ್ಕೆ ಏರಿಕೆಯಾದ್ರೆ, 803 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 38,938ಕ್ಕೆ ಬಂದು ನಿಂತಿದೆ.

18,55,746 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 1,230,510ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 5,862,98 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *