ಕೈವ್: ಮಾರ್ಚ್ 08 (ಉದಯಕಾಲ) ಉಕ್ರೇನ್ ನ ಸುಮಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಸುಮಿ ಕಾರಿಡಾರ್ ಅನ್ನು ತೆರೆಯಲಾಗುವುದು ಎಂದು ಉಕ್ರೇನ್ ಉಪ ಪ್ರಧಾನಿ ಐರಿನಾ ವೆರೆಶ್ ಚುಕ್ ಹೇಳಿದ್ದಾರೆ.
ಉಕ್ರೇನ್ ನ ಸುಮಿಯಲ್ಲಿ ಸಾಕಷ್ಟು ಭಾರತೀಯರು ಸಿಲುಕಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ ಒಂದು ದಿನದ ನಂತರ ಉಕ್ರೇನ್ ಉಪ ಪ್ರಧಾನಿ ಐರಿನಾ ವೆರೆಶ್ ಚುಕ್ ಸುಮಿ ಕಾರಿಡಾರ್ ತೆರೆಯುವ ಬಗ್ಗೆ ತಿಳಿಸಿದ್ದಾರೆ.
“ಇಂದು, ಸುಮಿ ನಗರಕ್ಕೆ ಮಾನವೀಯ ಕಾರಿಡಾರ್ ಅನ್ನು ಪ್ರಾರಂಭಿಸಬೇಕು” ಎಂದು ಉಕ್ರೇನ್ ಉಪ ಪ್ರಧಾನಿ ಐರಿನಾ ವೆರೆಶ್ ಚುಕ್ ಹೇಳಿದರು. ಇನ್ನು ಭಾರತ ಮತ್ತು ಚೀನಾದ ನಾಗರಿಕರು ಸೇರಿದಂತೆ ನಾಗರಿಕರನ್ನು ಸುಮಿಯಿಂದ ಪೋಲ್ಟವಾಕ್ಕೆ ಸ್ಥಳಾಂತರಿಸಲಾಗುವುದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಸುಮಿಯಲ್ಲಿ ತಾತ್ಕಾಲಿಕ ಕದನ ವಿರಾಮ ಮತ್ತು ಮಾನವೀಯ ಕಾರಿಡಾರ್ ಅನ್ನು ರಷ್ಯಾ ಘೋಷಿಸಿದ್ದರೂ, ವಿದ್ಯಾರ್ಥಿಗಳ ಸ್ಥಳಾಂತರವು ನಡೆಯಲು ಸಾಧ್ಯವಾಗಲಿಲ್ಲ. ವೆರೆಶ್ಚುಕ್ ಅವರು ಮಾನವೀಯ ಕಾರಿಡಾರ್ ಮೂಲಕ ಜನರು ಸುಮಿಯನ್ನು ಬಿಡಲು 7 ಗಂಟೆಗೆ (ಸ್ಥಳೀಯ ಸಮಯ) ಕದನ ವಿರಾಮ ಘೋಷಿಸಿದರು.