ಬೆಂಗಳೂರು: ರಾಜ್ಯದಲ್ಲಿ ಬುಧವಾರ ದಾಖಲೆಯ 4,764 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 55 ಸೋಂಕಿತರು ಸಾವಿಗೀಡಾಗಿದ್ದಾರೆ.
ಒಟ್ಟಾರೆ ಸೋಂಕು ಪ್ರಕರಣಗಳು 75 ಸಾವಿರದ ಗಡಿ ದಾಟಿದ್ದು, ಸಾವು ಕೂಡ 1,500ಕ್ಕೆ ತಲುಪಿವೆ. ಸಮಾಧಾನಕರವೆಂಬಂತೆ ಅತಿ ಹೆಚ್ಚು, ಅಂದರೆ 1,780 ಸೋಂಕಿತರು ಗುಣಮುಖರಾಗಿದ್ದಾರೆ.
ಸದ್ಯ ಸೋಂಕು ಪ್ರಕರಣಗಳ ಸಂಖ್ಯೆ 75,833, ಸಾವಿಗೀಡಾದವರು 1,519 ಹಾಗೂ ಗುಣಮುಖರಾದವರ ಸಂಖ್ಯೆ 27,239 ಆಗಿದೆ. 47,069 ಮಂದಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವವರ ಪೈಕಿ 618 ಮಂದಿ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ