ಕೊರೋನಾ : ಸ್ಯಾಂಡಲ್ ವುಡ್ ಕಾರ್ಮಿಕರಿಗೆ ಸಾಯಿಕುಮಾರ್ ಸೋದರರ ನೆರವು

ಕೊರೋನಾ : ಸ್ಯಾಂಡಲ್ ವುಡ್ ಕಾರ್ಮಿಕರಿಗೆ ಸಾಯಿಕುಮಾರ್ ಸೋದರರ ನೆರವು

ಬೆಂಗಳೂರು, ಜೂನ್, 16 ಕೊರೋನಾ ಎರಡನೇ ಅಲೆ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಾರ್ಮಿಕರಿಗೆ ಹಲವು ನಟ, ನಟಿಯರು ನೆರವು ನೀಡುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದಾರೆ.

ಸುದೀಪ್, ಉಪೇಂದ್ರ, ಯಶ್, ವಿಜಯ್ ಕಿರಗಂದೂರ್, ಪುನೀತ್ ರಾಜ್ ಕುಮಾರ್, ನೀನಾಸಂ ಸತೀಶ್ ಸೇರಿದಂತೆ ಅನೇಕ ಮಂದಿ ನೆರವು ನೀಡುತ್ತಿದ್ದು, ಇದೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಸಹೋದರರು ಕೂಡ ಸಹಾಯಕ್ಕೆ ನಿಂತಿದ್ದಾರೆ.

ಸಾಯಿಕುಮಾರ್, ನಟ ರವಿಶಂಕರ್, ಅಯ್ಯಪ್ಪ ಪಿ ಶರ್ಮಾ ಕೊರೊನಾ ಸಂಕಷ್ಟದಲ್ಲಿರುವ ಕಾರ್ಮಿಕರ ನೆರವಿಗಾಗಿ ಕರ್ನಾಟಕ ಚಲನಚಿತ್ರ ಒಕ್ಕೂಟಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಮೂಲತಃ ಕರ್ನಾಟಕದವರಲ್ಲದಿದ್ದರೂ ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸಾಯಿಕುಮಾರ್ ಸಹೋದರರು ಕಾರ್ಮಿಕರ ಸಹಾಯಕ್ಕೆ ಬಂದಿರುವ ಮೂಲಕ ಕನ್ನಡಿಗರ ಮೆಚ್ಚುಗೆ ಪಾತ್ರರಾಗಿದ್ದಾರೆ.

“ನಮ್ಮ ಜನಪ್ರಿಯ ಸಿಂಹಪಾಲು ಕರ್ನಾಟಕ ರಾಜ್ಯದ್ದೇ ಆಗಿದೆ. ಹೀಗಾಗಿ ಕನ್ನಡ ಚಲನಚಿತ್ರ ಕಾರ್ಮಿಕರಿಗೆ ನೆರವಾಗಬೇಕಾದ್ದು ನಮ್ಮ ಕರ್ತವ್ಯ” ಎಂದು ಸಾಯಿಕುಮಾರ್ ಮತ್ತು ಸಹೋದರರು ತಿಳಿಸಿದ್ದಾರೆ.

,

Leave a Reply

Your email address will not be published. Required fields are marked *