ಕೊರೊನಾ ಭಾನುವಾರ; ದೇಶದಲ್ಲಿ ನಿನ್ನೆ ದಾಖಲೆಯ 18840 ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ ಭಾನುವಾರ ಒಂದೇ ದಿನ ಸಾರ್ವಕಾಲಿಕ ದಾಖಲೆಯ 18840 ಕೊರೋನಾಪೀಡಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿ 412690ಕ್ಕೆ ಏರಿಕೆಯಾಗಿದೆ. ಕೇವಲ 8 ದಿನಗಳಲ್ಲಿ ಒಂದು ಲಕ್ಷ ಕೇಸ್‌ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಭಾನುವಾರ ಕೊರೋನಾಕ್ಕೆ 404 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 13504ಕ್ಕೆ ಏರಿಕೆಯಾಗಿದೆ. ಬುಧವಾರ ದೇಶದಲ್ಲಿ 15084 ಪ್ರಕರಣ ದಾಖಲಾಗಿದ್ದೇ ಈವರೆಗಿನ ದಾಖಲೆಯಾಗಿತ್ತು. ಅಂದೇ ದೇಶದಲ್ಲಿ ದಾಖಲೆಯ 454 ಸಾವುಗಳು ಸಂಭವಿಸಿದ್ದವು.

ಕಳೆದ 10 ದಿನಗಳಿಂದ ನಿರಂತರವಾಗಿ 10 ಸಾವಿರಕ್ಕೂ ಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿವೆ. ದೇಶದಲ್ಲಿ ಜೂ.1ರಿಂದ ಜೂ.21ರ ಅವಧಿಯಲ್ಲಿ 2,19,926 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *