ಹೋಮ್ ಮಿನಿಸ್ಟರನ್ನು ಕಾಂಗ್ರೆಸ್ ನವರೇ ಅತ್ಯಾಚಾರ ಮಾಡುತ್ತಿದ್ದಾರೆ

ಬೆಂಗಳೂರು,ಆ.26 ಹೋಮ್ ಮಿನಿಸ್ಟರ್ (ಗೃಹಸಚಿವ)ರನ್ನು ಅತ್ಯಾಚಾರ ಮಾಡುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಾಗಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಕಾನೂನು ವೈಫಲ್ಯತೆ ಆಗಿರುವುದನ್ನು ಒಪ್ಪಿಕೊಂಡು ಸಚಿವ ಅರಗ ಜ್ಞಾನೇಂದ್ರ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ನಾಯಕರ ಆಗ್ರಹಕ್ಕೆ ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ, ಹೋಮ್ ಮಿನಿಸ್ಟರನ್ನು ರೇಪ್ ಮಾಡುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ.ವಿದ್ಯಾರ್ಥಿನಿ ನಿರ್ಜನವಾದ ಪ್ರದೇಶಕ್ಕೆ ರಾತ್ರಿ ಹೊತ್ತು ಅಲ್ಲಿಗೆ ಹೋಗಬಾರದಿತ್ತು.ಅಲ್ಲಿ ಏಕೆ ಹೋಗಿದ್ದರೋ ಗೊತ್ತಿಲ್ಲ. ಹೋಗಬಾರದು ಎಂದೂ ಹೇಳಲು ಆಗುವುದಿಲ್ಲಎಂದು ಮಾರ್ಮಿಕವಾಗಿ ಉತ್ತರಿಸಿದರು.

ಮೈಸೂರಿಗೆ ತೆರಳುತ್ತಿದ್ದು, ಅಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ವಿವರಿಸುವುದಾಗಿ ಹೇಳಿದ ಅರಗ ಜ್ಞಾನೇಂದ್ರ, ಕಾಂಗ್ರೆಸ್ ಅವರು ವಿರೋಧ ಪಕ್ಷದವರಾಗಿ ಸತ್ಯ ಶೋಧನಾ ಸಮಿತಿ ಮಾಡಲಿ, ಅಮೇಲೆ ಪ್ರತಿಕ್ರಿಯಿಸುತ್ತೇನೆ. ಕಾಂಗ್ರೆಸ್ ಅವರು ನನ್ನನ್ನೇ ಮೊದಲು ರೇಪ್ ಮಾಡತ್ತಿದ್ದಾರೆ ಎಂದರು.

, ,

Leave a Reply

Your email address will not be published. Required fields are marked *