ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಗೆ ಭವಿಷ್ಯವಿಲ್ಲ, ಕುಗ್ಗಿದೆ ಎಂಬೆಲ್ಲ ಬಿಜೆಪಿಯವರ ಹೇಳಿಕೆಗಳು ಸುಳ್ಳು. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. 2023ರ ಚುನಾವಣೆಯಲ್ಲಿ ಬದಲಾವಣೆ ಆಗುತ್ತದೆ ಎಂದು ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಇಂದು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ. ಸೋಲಿನ ಕಾರಣದ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡ್ತಾರೆ. ಪಂಜಾಬ್ನಲ್ಲಿ 6 ತಿಂಗಳಿಂದ ಗೊಂದಲ ಸೃಷ್ಟಿಯಾಗಿತ್ತು, ಹೀಗಾಗಿ ಹಿನ್ನಡೆಯಾಗಿದೆ. ಅದನ್ನು ಸರಿಪಡಿಸುವ ಕೆಲಸ ಆಗುತ್ತೆ ಎಂದರು. ಇದೇ ವೇಳೆ ಈಗಲ್ ಟನ್ ರೆಸಾರ್ಟ್ ವಿವಾದ ವಿಚಾರವಾಗಿ ಮಾತನಾಡಿದ ಸಂಸದರು,
ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೇನು ತೊಂದರೆ ಆಗಿದೆ?. ಅವರೇ 27 ಎಕರೆ ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಬರೆಸಿಕೊಟ್ಟರೆ ಸಂತೋಷ. ರೈತರು ಕಷ್ಟದಲ್ಲಿರುವ ಬಗ್ಗೆ ಮಾತನಾಡಿದ್ದರೆ ಉತ್ತರ ಕೊಡ್ತಿದ್ದೆ. ಅವರ ಬಣ್ಣ ಬಯಲಾಗಿರುವ ಸಂದರ್ಭದಲ್ಲಿ ನಾನೇಕೆ ಮಾತನಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕೆ ವಿರುದ್ಧ ಹರಿಹಾಯ್ದರು.
ರೆಸಾರ್ಟ್ನವರು ಯಾವ ರೇಟ್ಗೆ ಸೈಟ್ ಮಾಡಿದ್ದರು. ಅದರ ಆಧಾರದ ಮೇಲೆ ದಂಡ ವಿಧಿಸಿದ್ದಾರೆ. ಜಿಲ್ಲಾಧಿಕಾರಿ – ಸರ್ಕಾರ ತೀರ್ಮಾನ ಮಾಡಿದೆ. ಇದರಲ್ಲಿ ಪಕ್ಷ, ನಾಯಕರ ಪಾತ್ರ ಏನೂ ಇಲ್ಲ. ಮುಖ್ಯಮಂತ್ರಿಗೆ ಹೇಳಿ ಬರೆಸಿಕೊಡಲಿ, ನಮ್ಮದೇನೂ ತಕರಾರಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.