ರಾಯಚೂರು: ಡಿ.26 ಉದಯಕಾಲ: ಮತಾಂತರ ನಿಷೇಧ ತಿದ್ದುಪಡಿ ಬಿಲ್ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ “ಹಣದ ಆಮಿಷಕ್ಕೆ ಒಳಗಾಗಿ SC/ST ಜನಾಂಗದ ಬಡವರು, ಮುಗ್ಧರು ಮತಾಂತರವಾಗುತ್ತಿದ್ದಾರೆ” ಎಂದು ಸ್ಪೀಕರ್, ಗೃಹ ಸಚಿವರು ನೀಡಿದ್ದ ಹೇಳಿಕೆ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಆರ್. ಮಾನಸಯ್ಯ ಅವರು ರಾಯಚೂರು ಜಿಲ್ಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಆರ್. ಮಾನಸಯ್ಯ ನೀಡಿರುವ ದೂರಿಗೆ ಪೊಲೀಸರಿಂದ ಹಿಂಬರಹ ನೀಡಲಾಗಿದೆ. ದೂರಿನಲ್ಲಿ ತಿಳಿಸಿರುವ ಅಂಶಗಳು, ಶಾಸಕಾಂಗ ಸಭೆಯಲ್ಲಿ ನಡೆಯುವ ಕಾರ್ಯಕಲಾಪಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಹಿಂಬರಹ ನೀಡಿದ್ದಾರೆ.
ಕಳೆದ ಗುರುವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಎಸ್ಸಿ, ಎಸ್ಟಿ ಸಮುದಾಯದ ಆಪ್ರಾಪ್ತರನ್ನ, ಬಡವರನ್ನ ಆಮಿಷ ತೋರಿಸಿ ಮತಾಂತರ ಮಾಡುವುದಕ್ಕೆ ಶಿಕ್ಷೆ ವಿಧಿಸಲಾಗಿದೆ. ಬಲವಂತದ ಮತಾಂತರ ಮಾಡಿದರೆ ಶಿಕ್ಷೆಯ ಜತೆಗೆ ದಂಡವೂ ವಿಧಿಸಲಾಗಿದೆ ಎಂದು ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ಬಗ್ಗೆ ತಿಳಿಸಿದ್ದರು