‘ಲಸಿಕಾ ಮಹಾ ಅಭಿಯಾನ’ಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

‘ಲಸಿಕಾ ಮಹಾ ಅಭಿಯಾನ’ಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಇಂದು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ‘ಲಸಿಕಾ ಮಹಾ ಅಭಿಯಾನ’ಕ್ಕೆ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ,ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಭಿಯಾನ ಆರಂಭವಾಗಿದೆ.ಕೇಂದ್ರ ನೀಡುವ ಈ ಉಚಿತ ಲಸಿಕೆ ಅಭಿಯಾನ ಸಂತಸ ತಂದಿದೆ.ರಾಜ್ಯದಲ್ಲಿ
5 ರಿಂದ 7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು,ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ.ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಕರೆ ನೀಡಿದರು‌
ಆದಷ್ಟು ಬೇಗ‌ ಕೋವಿಡ್ ಕೊನೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ ಸಿಎಂ ಯಡಿಯೂರಪ್ಪ,ಅನನ್ ಲಾಕ್ ಮಾಡಿದರೂ ಸಹ ಕೊರೊನಾ ಭಯ ಇದ್ದೇಯಿದೆಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಅನ್ ಲಾಕ್ ಮಾಡಿದರೂ ಬಸ್‌ನಲ್ಲಿ ನೂಕು ನುಗ್ಗಲು ಆಗುತ್ತಿದೆ.ಇದದನ್ನು ಸ್ವತಃ ನಾನೇ ನೋಡಿದ್ದೇನೆ.ಒಂದಷ್ಟು ಜನರು ನಿಯಮ ಪಾಲನೆ‌ ಮಾಡುವಂತೆ ಎಂದು ಸಿಎಂ ಮನವಿ ಮಾಡಿದರು.
18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರಿಗೂ ಉಚಿತ ಲಸಿಕಾ ಅಭಿಯಾನದಡಿ ಲಸಿಕೆ ನೀಡಲಾಗುತ್ತಿದೆ. ವಿಶೇಷ ಚೇತನ,ಹೊಂದಿರುವವರು,ಕಾರಾಗಾರದ ಕೈದಿಗಳು ,ಚಿತಾಗಾರ/ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯ ಕಾರ್ಯಕರ್ತರು ಮತ್ತು ಅವರ ಕುಟುಂಬಸ್ಥರು, ಕೋವಿಡ್‌ ಕೆಲಸಕ್ಕೆ ನಿಯೋಜಿಸಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ
ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು,ಅಂಚೆ ಇಲಾಖೆ ಸಿಬ್ಬಂದಿ,ಬೀದಿ ಬದಿ ವ್ಯಾಪಾರಿಗಳು
ಭದ್ರತೆ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ,ನ್ಯಾಯಾಂಗ ಅಧಿಕಾರಿಗಳು
ವಯೋವೃದ್ಧರು/ ತೀವ್ರ ಅನಾರೋಗ್ಯ ಇರುವವರು,‌ಮಕ್ಕಳ ಸಂರಕ್ಷಣಾಧಿಕಾರಿಗಳು/ ಮಹಿಳಾ ಮಕ್ಕಳ ಇಲಾಖೆ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ,ಆಸ್ಪತ್ರೆಗಳಲ್ಲಿ ಸರಕು ಸರಬರಾಜು ಮಾಡುವವರು, ಆಯಿಲ್‌ ಇಂಡಸ್ಟ್ರಿ& ಗ್ಯಾಸ್ ಸರಬರಾಜು ಮಾಡುವವರು,ಔಷಧಿ ತಯಾರಕರು,ವೃದ್ಧಾಶ್ರಮ ವಾಸಿಗಳು ಹಾಗೂ ನಿರ್ಗತಿಕರು,ಆಹಾರ ನಿಗಮ‌ ಸಿಬ್ಬಂದಿ,ಎಪಿಎಂಸಿ ಕೆಲಸಗಾರರಿಗೆ ಲಸಿಕೆ‌ ನೀಡಲಾಗುವುದು.

ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.

, ,

Leave a Reply

Your email address will not be published. Required fields are marked *