ಪ್ಯಾರಿಸ್: ಮೇ 26 (ಉದಯಕಾಲ ನ್ಯೂಸ್) ಕೌಂಟಿ ಕ್ರಿಕೆಟ್ ನಲ್ಲಿ ಅಜೇಯ ದ್ವಿಶತಕದ ಸಂತೋಷದಲ್ಲಿರುವ ಭಾರತದ ಖ್ಯಾತ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಪ್ಯಾರಿಸ್ನಲ್ಲಿ ತಮ್ಮ ಕುಟುಂಬದೊಂದಿಗೆ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಕೌಂಟಿ ಕ್ರಿಕೆಟ್ ನಲ್ಲಿನ ಅವರ ಯಶಸ್ವಿ ಪ್ರದರ್ಶನವು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ಟೆಸ್ಟ್ ತಂಡದಲ್ಲಿ ಕಮ್ ಬ್ಯಾಕ್ ಆಗಲು ಕಾರಣವಾಯಿತು. ಸಸೆಕ್ಸ್ ಕೌಂಟಿ ಕ್ಲಬ್ ಪರ ಆಡುತ್ತಿರುವ ಪೂಜಾರ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಎರಡು ದ್ವಿಶತಕ ಸಿಡಿಸಿದ್ದರು. ಪೂಜಾರ ಕೌಂಟಿ ಚಾಂಪಿಯನ್ ಶಿಪ್ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಕೌಂಟಿ ಕ್ರಿಕೆಟ್ ಮುಗಿದ ನಂತರ, ಪೂಜಾರ ಈ ದಿನಗಳಲ್ಲಿ ತನ್ನ ಪತ್ನಿ ಪೂಜಾ ಮತ್ತು ಮಗಳು ಅದಿತಿಯೊಂದಿಗೆ ಪ್ಯಾರಿಸ್ನಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದಾರೆ. ಚೇತೇಶ್ವರ ಪೂಜಾರ ಅವರು ತಮ್ಮ ಕುಟುಂಬದೊಂದಿಗೆ ಕೇಳಯುತ್ತಿರುವ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾದ ಕೂ ಆಪ್ನಲ್ಲಿ ಹಂಚಿಕೊಂಡಿದ್ದಾರೆ. ಪ್ಯಾರಿಸ್ ಎಫಿಲ್ ಟವರ್ ನಡುವೆ ಇರುವ ಫೋಟೋ ಹಂಚಿಕೊಂಡ ಪೂಜಾರಾ